ತುಮಕೂರು: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಸಚಿವ ಸಂಪುಟ ರಚನೆಗೆ ಕೆಂದ್ರದ ವರಿಷ್ಠರ ಮೊರೆ ಹೋಗಿದ್ರೆ. ಇತ್ತ ಸಚಿವ ಸ್ಥಾನಕ್ಕಾಗಿ ಹಲವಾರು ಶಾಸಕರಿಂದ ಲಾಭಿ ನಡೆಸಲು ಶುರುವಾಗಿದ್ದು, ಇದೀಗ ತುಮಕೂರಿನ ವೈಎಎನ್ ಬಳಗದ ವತಿಯಿಂದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಯಣ ಸ್ವಾಮಿಯವರಿಗೆ ಶಿಕ್ಷಣ ಸಚಿವ ಸ್ಥಾನವನ್ನು ನೀಡುವಂತೆ ಒತ್ತಾಯಿಸಿ ಸುದ್ದಿಗೋಷ್ಠಿ ನಡೆಸಲಾಯಿತು. ಈಗಾಗಲೇ ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಸವರಾಜ್ ಬೊಮ್ಮಾಯಿ ಹೊಸ ಸಂಪುಟ ರಚನೆ ಮಾಡಬೇಕಾದ ಹಿನ್ನೆಲೆ 3ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಒಂದು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ವೈ.ಎ.ನಾರಾಯಣ ಸ್ವಾಮಿ ಯವರನ್ನ ಶಿಕ್ಷಣ ಸಚಿವರಾಗಿ ಮಾಡಬೇಕೆಂದು ಇಂದು ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ವೈ.ಎ.ಎನ್ ಬಳಗದ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರದ ಬಿಜೆಪಿ ಹೈಕಮಾಂಡ್ ಗೆ ಒತ್ತಾಯ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ವೈಎನ್ಎ ಬಳಗದ ಸದಸ್ಯರು ಮತ್ತು ರೇವಣ್ಣ ಸಿದ್ದಯ್ಯ ಇತರರು ಇದ್ದರು.