ನೀವು ನೀಡಿರುವ ಮತ ಬಿಕ್ಷೆಯಿಂದ ಶಾಸಕನಾಗಿದ್ದೇನೆ: ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ | ವಿಶ್ವ ಕನ್ನಡಿ

ತುಮಕೂರು: ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗಳಿಗೆ ಶಾಸಕರಾದ ಡಿಸಿ ಗೌರೀಶಂಕರ್ ಚಾಲನೆ ನೀಡಿದರು. ಗೂಳೂರು ಜಿಲ್ಲಾಪಂಚಾಯ್ತಿ ವ್ಯಾಪ್ತಿಗೊಳಪಡುವ ಸಿದ್ದಾಪುರ,ನೇರಳಾಪುರ, ನಾಯಕಪಾಳ್ಯ, ದೊಡ್ಡೇಗೌಡನಪಾಳ್ಯ, ಐನಾಪುರ, ಭೈಚಾಪುರಗ್ರಾಮಗಳಲ್ಲಿ ಸಿಸಿ ರಸ್ತೆ ಸೇರಿದಂತೆ ಹಲವು ಅಭಿವೃದ್ದಿ ಕಾಮಗಾರಿ ಹಾಗೂ ಹರಳೂರು ಗ್ರಾಮದಲ್ಲಿ ಶಂಕುಸ್ತಾಪನೆ ನೆರವೇರಿಸಿದರು. ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಶಾಸಕ ಡಿಸಿ ಗೌರೀಶಂಕರ್ ಮಾತನಾಡಿ ಎರಡೂವರೆ ವರ್ಷಗಳ ಅವಧಿಯಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ 22 ಪಂಚಾಯ್ತಿಗಳಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ, ಉಳಿಕೆ ಅವಧಿಯಲ್ಲಿ ಬಾಕಿ ಇರುವ ಗ್ರಾಮ ಪಂಚಾಯ್ತಿಗಳಲ್ಲಿ ಹಂತ ಹಂತವಾಗಿ ಅಭಿವೃದ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಹೆಬ್ಬೂರು ಹಾಗೂ ಗೂಳೂರು ಏತ ನೀರಾವರಿ ಯೋಜನೆ ಯಿಂದ ಯಾವುದೇ ಪ್ರಯೋಜನವಾಗಿಲ್ಲ, ಗಿಮಿಕ್ಮಾಡಿಜನರಿಂದ ಓಟುಗಿಟ್ಟಿಸಲು ಪೈಪ್ಲೈನ್ಮಾಡಲಾಗಿದೆ, ಈ ಯೋಜನಗೆ 300 ಎಂಸಿಎಫ್ಟಿ ನೀರು ಹಂಚಿಕೆಯಾಗಿದೆ ಈ ನೀರಿ ನಿಂದ ಒಂದು ಕೆರೆಯೂ ತುಂಬುವುದಿಲ್ಲ ಯೋಜನೆಯ ಲೋಪದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತು ಕತೆ ನಡೆಸಿದ್ದು, ಸರ್ಕಾರದ ಹಂತದಲ್ಲಿ ಯೋಜನೆ ಸಿದ್ದವಾಗುತ್ತಿದೆ, ಬೆಂಗಳೂರಿ ನಿಂದ ನಿಜಗಲ್ಸೀಪೇಜ್ನೀರು ಹರಿಸಿ ಅಲ್ಲಿ ಮೂರು ಹಂತದಲ್ಲಿ ಸಂಸ್ಕರಣೆ ಮಾಡಿ ಅಲ್ಲಿಂದ ಗೂಳೂರುಕೆರೆಗೆ ನೀರು ಹರಿಸಲಾಗುವುದು ಬಳಿಕ ನಾಗವಲ್ಲಿ, ಹೊನ್ನುಡಿಕೆ, ಹೊನಸಿಗೆರೆ, ಕಣಕುಪ್ಪೆ,

ಹೆಬ್ಬೂರು, ಮುಳಕುಂಟೆಕೆರೆಗಳಿಗೆ ನೀರುಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸಿ ರೈತರ ಜೀವನ ಮಟ್ಟ ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದರು. ನಂತರ ನೀವು ನೀಡಿರುವ ಮತ ಬಿಕ್ಷೆಯಿಂದ ಶಾಸಕನಾಗಿದ್ದೇನೆ,  ನಿಮ್ಮಗಳ ಕಷ್ಟ ಸುಖ ನನ್ನ ಜವಾಬ್ದಾರಿ, ನಿಮ್ಮ ಮನೆ ಮಗನಾಗಿ ಕಷ್ಟ ಸುಖ ಹಂಚಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷರಾದ ಪಾಲನೇತ್ರಯ್ಯ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ , ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ, ಮಾಜಿ ಗ್ರಾಮಪಂಚಾಯ್ತಿ ಅಧ್ಯಕ್ಷೆ, ಮಾಜಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಜೆಡಿಎಸ್ ಮುಖಂಡರು ಇತರರು ಉಪಸ್ತಿತರಿದ್ದರು.