ಸ್ಮಾರ್ಟ್ ಸಿಟಿ ಯೋಜನೆಯ ಎಲ್ಇಡಿ ಲೈಟ್ ಅಳವಡಿಕೆಯಲ್ಲಿ ಬರೋಬ್ಬರಿ 45-50 ಕೋಟಿ ಅವ್ಯವಹಾರ: ಪಾಲಿಕೆ ಸದಸ್ಯ ಜೆ.ಕುಮಾರ್ ಆರೋಪ

ತುಮಕೂರು: ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತಂದಿದೆ ಸಾವಿರಾರು ಕೋಟಿ ರೂ ಅನುದಾನವನ್ನೂ ಬಿಡುಗಡೆ ಮಾಡಿದೆ ಆದರೆ ನಗರಗಳು ಸ್ಮಾರ್ಟ್ ಆಗುವ ಬದಲು ಯೋಜನೆಯಲ್ಲಿ ಅವ್ಯವಹಾರ ನಡೆಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವೆರಿಸ್ಮಾರ್ಟ್ ಆಗುತ್ತಿರುವ ಲಕ್ಷಣ ಕಾಣುತ್ತಿದೆ. ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಳವಡಿಸಲಾಗುತ್ತಿರುವ ಎಲ್ಇಡಿ ಬೀದಿ ದೀಪಗಳ ಕಾಮಗಾರಿಯಲ್ಲಿ ಬರೊಬ್ಬರಿ 45-50 ಕೋಟಿ ರೂಗಳ ಅವ್ಯಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಬರೊಬ್ಬರಿ 1 ಸಾವಿರ ಕೋಟಿ ರೂ ಬಿಡುಗಡೆ ಮಾಡಿದೆ ಕಳೆದ ಮೂರು ವರ್ಷಗಳಿಂದ ನಿರಂತರ ಸ್ಮಾರ್ಟ್ ಸಿಟಿ ಕಾಮಗಾರಿ ಸಾಗುತಿದೆ. ದಿಕ್ಕು ದೆಸೆಯಿಲ್ಲದೆ ಸಾಗುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿರವುದು ಒಂದೆಡೆಯಾದರೆ, ಇಡೀ ಯೋಜನೆ ಕಳಪೆ ಹಾಗೂ ಅವ್ಯವಹಾರದಿಂದ  ಕೂಡಿದೆ ಎಂಬ ಆರೋಪ ಮತ್ತೊಂದೆಡೆಯಿಂದ ಕೇಳಿ ಬರುತ್ತಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸುತ್ತಿರುವ ಎಲ್ಇಡಿ ಲೈಟ್ ನಲ್ಲಿ ಬರೊಬ್ಬರಿ 45-50 ಕೋಟಿ ರೂ ಅವ್ಯವಹಾರ ನಡೆದಿದೆ ಎಂದು ಸ್ವತಃ ಪಾಲಿಕೆ ಸದಸ್ಯರೇ ಆರೋಪಿಸಿದ್ದಾರೆ, 35 ವಾರ್ಡಗಳಿಗೆ 39 ಸಾವಿರ ಎಲ್ ಇಡಿ ಬೀದಿ ದೀಪ ಅಳವಡಿಸಲಾಗುತ್ತಿದೆ. ಇದಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಅಡಿ ಬರೊಬ್ಬರಿ 7೦ ಕೋಟಿ ರೂ ವಿನಿಯೋಗಿಸಲಾಗುತ್ತಿದೆ.  ಅಸಲಿಗೆ ಕೇವಲ 13 ಕೋಟಿ ರೂ ಗಳಲ್ಲಿ ಎಲ್ಇಡಿ ಬೀದಿ ದೀಪವನ್ನು ಅಳವಡಿಸಬಹುದಿತ್ತು. ಇದರ ಬದಲಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು 70 ಕೋಟಿ ರೂ ಪ್ರಸ್ತಾವನೆ ಕಳುಹಿಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಿದ್ದಾರೆ ಎಂದು ಪಾಲಿಕೆ ಸದಸ್ಯ ಜೆ.ಕುಮಾರ್ ಅರೋಪಸಿದ್ದಾರೆ.

ಎಲ್ಇಡಿ ಲೈಟನ್ನು ಅಳವಡಿಸುವ ಗುತ್ತಿಗೆಯನ್ನು ಮಂಜು ಎಲೆಕ್ಟ್ರಿಕಲ್ ಹಾಗೂ ವೈಟ್ ಪ್ಲೆ ಕಾರ್ಡ ಎಂಬ ಕಂಪನಿಗೆ ಕೊಡಲಾಗಿದೆ. ಕೆಲಸ ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ವೈಟ್ ಪ್ಲೆ ಕಾರ್ಡ ಕಂಪನಿ ವಿರುದ್ದ ಈಗಾಗಲೇ ಎಫ್ಐಆರ್ ದಾಖಲಾಗಿದೆ ಅಂಥವರನ್ನು ಕಪ್ಪುಪಟ್ಟಿಗೆ ಸೇರಿಸುವ ಬದಲು ಗುತ್ತಿಗೆ ನೀಡಿರೋದನ್ನು ಪಾಲಿಕೆ ಸದಸ್ಯರುಗಳು ಖಂಡಿಸಿದ್ದಾರೆ. ಅಧಿಕಾರಿಗಳು ಕಳುಹಿಸಿದ ಪ್ರಸ್ತಾವನೆಯಿಂದಾಗಿ ಬರೊಬ್ಬರಿ 45-50 ಕೋಟಿ ರೂ ತೆರಿಗೆ ಹಣ ಪೋಲಾಗಿದೆ ಅನ್ನೋದು ಸದಸ್ಯ ಜೆ.ಕುಮಾರ್ ಅವರ ಆಪಾದನೆಯಾಗಿದೆ.

ಆದರೆ ಈ ಎಲ್ಲಾ ಆರೋಪವನ್ನು ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ ತಳ್ಳಿಹಾಕುತ್ತಾರೆ. ತಾವು  ಬೈಲಾ ಪ್ರಕಾರವಾಗಿಯೇ ಎಲ್ಲವನ್ನೂ ಮಾಡಿದ್ದೇವೆ ಎಂದು  ಉತ್ತರ ಕೊಡುತ್ತಾರೆ.

One thought on “ಸ್ಮಾರ್ಟ್ ಸಿಟಿ ಯೋಜನೆಯ ಎಲ್ಇಡಿ ಲೈಟ್ ಅಳವಡಿಕೆಯಲ್ಲಿ ಬರೋಬ್ಬರಿ 45-50 ಕೋಟಿ ಅವ್ಯವಹಾರ: ಪಾಲಿಕೆ ಸದಸ್ಯ ಜೆ.ಕುಮಾರ್ ಆರೋಪ

 1. Get it examined by an impartial laboratory.
  Some water filter techniques have the flexibility to add wholesome minerals like potassium,
  calcium, and magnesium to the water. Test it yourself utilizing
  a special water testing kit. 1. What water contaminants are you trying to reduce?
  2. Is alkaline water essential to you? Alkaline water is
  that which has a pH of better than 7. Some folks consider alkaline water
  to be healthier and higher for the physique. The answer to this question ought to resolve which water filter you want.
  Listed below are just a few vital factors to contemplate before you buy a countertop home water
  filter. Some are good at eradicating chlorine, whereas others
  are better for heavy metals like lead. This improves the mineral
  content material of the water, but additionally raises the pH to more alkaline ranges.
  This can be a yearly drinking water high quality
  report from your native water authority. Try your local Consumer Confidence Report (CCR).
  The most effective tabletop water filters will scale back a wide range of contaminants.

Comments are closed.