ಸಾಸಲು ಕೆರೆಗೆ ಹೇಮೆ ರೈತರ ಹರ್ಷ

ತುಮಕೂರು : ಐತಿಹಾಸಿಕ ಸಾಸಲು ಕೆರೆಯನ್ನು ತುಂಬಿಸುವ ಕನಸು ನನಸಾಗಿದೆ. ಇದರಿಂದ ಸುತ್ತಲಿನ ಹಳ್ಳಿಗಳ ರೈತರ ಜೀವನಾಡಿಯಾಗಿರುವ ಹೇಮಾವತಿ ನೀರಿನಿಂದ ಈ ಭಾಗದ ರೈತರ ಸಂಭ್ರಮ ಹಾಗು ಹರ್ಷ ಹಿಮ್ಮಡಿಯಾಗಿದೆ. ಕಳೆದ ಹಲವು ದಶಕಗಳಲ್ಲಿ ಒಮ್ಮೆ ಮಾತ್ರ ಭಾರಿ ಮಳೆಗೆ ಕೆರೆ ತುಂಬಿ ಹರಿದಿದೆ.

ಈಗ ಕಾಲುವೆ ಮೂಲಕ ಹೇಮಾವತಿ ನೀರು ಹರಿಸಿ ಕೆರೆ ತುಂಬಿಸಲಾಗಿದೆ. ಇಲ್ಲಿಯವರೆಗೆ ಮಳೆ ಬಂದರೆ ಮಾತ್ರ ಕೆರೆಗೆ ನೀರು ಎಂಬ ಪರಿಸ್ಥಿತಿ ಇತ್ತು. ಈಗ ಕಾಲುವೆಯಲ್ಲಿ ನೀರು ಹರಿಯುವುದರಿಂದ ಕೆರೆ ತುಂಬುತ್ತಿದೆ ಎಂದು ಸ್ಥಳೀಯ ರೈತರು ಹರ್ಷ ವ್ಯಕ್ತಪಡಿಸಿದರು. ಕಳೆದ ಹಲವು ದಶಕಗಳಿಂದ ಕುಟುಂತ್ತಾ ಸಾಗುತ್ತಿದ್ದ ಕಾಮಾಗಾರಿ ಜೆ.ಸಿ. ಮಾಧುಸ್ವಾಮಿ ಸಚಿವರಾದ ನಂತರ ತಾಲ್ಲೂಕಿನ ಕೆರೆಗಳನ್ನು ತುಂಬುವ ಕೆಲಸಕ್ಕೆ ಮರು ಚಾಲನೆ ನೀಡಿದ್ದರು. ಅದರ ಪರಿಣಾಮ ಐತಿಹಾಸಿಕ ಸಾಸಲು ಕೆರೆ ತುಂಬಿ ಶೆಟ್ಟಿಕೆರೆಗೆ ನೀರು ಹರಿಯಲು ಆರಂಭಿಸಿದೆ. ಕೆರೆ ಕೋಡಿ ಬಿದ್ದು ಹರಿದು ಬರುವ ನೀರಿನಿಂದ ಸಣ್ಣಪುಟ್ಟ ಹಳ್ಳ, ಚೆಕ್ ಡ್ಯಾಂ ತುಂಬುವುದರಿಂದ ಅಂತರ್ಜಲ ಮಟ್ಟ ಹೆಚ್ಚಳಗೊಂಡು ರೈತರ ಪಂಪ್‍ಸೆಟ್‍ಗಳಿಗೆ ನೀರು ಬರಲಿದೆ ಎಂದು ರೈತರು ಭಾವುಕರಾದರು. ಸಾಸಲು ಕೆರೆಗೆ ಭಾನುವಾರ ಭೇಟಿ ನೀಡಿದ್ದ ಕುಪ್ಪೂರು ಸಂಸ್ಥಾನ ಮಠದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಕೆರೆ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು ನಾವುಗಳು ಸೇರಿದಂತೆ ಹಲವು ಜನರ ಹೋರಾಟದ ಫಲವಾಗಿ ಸಾಸಲು ಕೆರೆ ಭರ್ತಿಯಾಗಿದ್ದು ಸಾವಿರಾರು ಎಕರೆ ಬರಡು ಭೂಮಿ ಹಚ್ಚ ಹಸಿರಿನಂದ ನಳನಳಿಸಲಿದೆ. ಸತತ ಹಲವು ದಿನಗಳ ಕಾಲ ನೀರು ಹರಿದು ಬಂದ ಕಾರಣ ಕೆರೆ ಭರ್ತಿಯಾಗಿದೆ. ಶೆಟ್ಟಿಕೆರೆಯ ಯುವ ಸಮುದಾಯ ಸ್ವಯಂ ಪ್ರೇರಿತವಾಗಿ ಶೆಟ್ಟಿಕೆರೆಯ ಕೆರೆಯನ್ನು ಸ್ವಚ್ಚಗೊಳಿಸಿರುವುದು ಸಂತಸಕರ ವಿಚಾರ ಎಂದರು. ಮಾಜಿ ಶಾಸಕ ಲಕ್ಕಪ್ಪ ಕೆರೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕೆರೆಗೆ ನೀರು ಹರಿಯಲು ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ಡಾ. ಪರಮೇಶ್ವರ್, ಪುರಸಭಾ ಸದಸ್ಯ ಸಿ.ಡಿ.ಸುರೇಶ್, ನಿವೃತ್ತ ತಜಸೀಲ್ದಾರ್ ಲಕ್ಷ್ಮಣಪ್ಪ, ಕೃಷ್ಣೇಗೌಡ, ಬ್ರಹ್ಮಾನಂದ್, ಸಿ.ಡಿ.ಚಂದ್ರಶೇಖರ್, ಆಟೋ ಮಂಜುನಾಥ್, ಕಿರಣ್‍ನಿಶಾನಿ, ಸೇರಿದಂತೆ ಹಲವು ಮುಖಂಡರು ಕೆರೆಗೆ ಭೇಟಿ ನೀಡಿಸಂತಸ ವ್ಯಕ್ತಪಡಿಸಿದರು.