ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸರ ಬಂದೂಕು | ರೌಡಿಶೀಟರ್ ರೋಹಿತನ ಮೇಲೆ ಶೂಟೌಟ್ | Vishwa kannadi

ತುಮಕೂರು: ಡಕಾಯಿತಿ ಪ್ರಕರಣದಲ್ಲಿ ರೌಡಿಶೀಟರ್ ರೋಹಿತನನ್ನ ಬಂಧಿಸಿದ್ದ ತಿಲಕ್ ಪಾರ್ಕ್ ಪೊಲೀಸರು, ರೋಹಿತನ್ನು ಡಕಾಯಿತಿಗಾಗಿ ಬಳಸುತ್ತಿದ್ದ ಮಚ್ಚು ಬಚ್ಚಿಟ್ಟದ್ದ ಜಾಗಕ್ಕೆ ಪೊಲೀಸರು ರೋಹಿತನ್ನು ಕರೆದುಕೊಂಡು ಹೋಗಿದ್ದ ಸಮಯದಲ್ಲಿ ಮಚ್ಚನ್ನ ತೋರಿಸಿ ಅದೇ ಮಚ್ಚಿನಿಂದ ಹೆಡ್ ಕಾನ್ಸ್ ಟೇಬಲ್ ಹನುಮರಂಗಯ್ಯಗೆ ಅಟ್ಯಾಕ್ ಮಾಡಿದ್ದಾನೆ, ಹೆಡ್ ಕಾನ್ಸ್ ಟೇಬಲ್ ಹನುಮರಂಗಯ್ಯಗೆ ಎಡಭುಜಕ್ಕೆ ಮಚ್ಚಿನೇಟು  ಬಿದ್ದಿದೆ ಆ ಸಮಯದಲ್ಲಿ ರೋಹಿತನ ದಾಳಿಗೆ ಪ್ರತಿಯಾಗಿ ಸಿಪಿಐ ಮುನಿರಾಜು ಹಾರಿಸಿದ ಗಾಳಿಯಲ್ಲಿನ ಗುಂಡಿಗೆ ಶರಣಾಗದ ರೋಹಿತನ ಎಡಗಾಲಿಗೆ ಶೂಟ್ ಆಗಿದೆ, ಗಾಯಾಳು ರೋಹಿತನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ಹೆಡ್ ಕಾನ್ಸ್ ಟೇಬಲ್ ಹನುಮರಂಗಯ್ಯಗೆ ಎಡಭುಜಕ್ಕೆ ಮಚ್ಚಿನೇಟು  ಬಿದ್ದಿ ಕಾರಣ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರೆ. ಈ ಘಟನೆ ತುಮಕೂರು ತಾಲ್ಲೂಕಿನ ಮಾರನಾಯಕಪಾಳ್ಯ ಬಳಿ ನಡೆದಿದೆ ಮತ್ತು ಈ ಪ್ರಕರಣ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.