ತುಮಕೂರು: ಏಪ್ರಿಲ್-2022: ಭಾರತದ ಅತೀದೊಡ್ಡ ಹಾಗೂ ಶರವೇಗದಲ್ಲಿ ಬೇಳೆಯುತ್ತಿರುವ ರಿಲಯನ್ಸ್ ರೀಟೈಲ್ ನ ಪಾದರಕ್ಷೆಗಳ ವಿಶೇಷ ಸರಣಿ, ಟ್ರೆಂಡ್ಸ್ ಫುಟ್ ವೇರ್ ಕರ್ನಾಟದ ತುಮಕೂರಿನಲ್ಲಿ ತನ್ನ ಎರಡನೇ ಮಳಿಗೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಟ್ರೆಂಡ್ಸ್ ಫುಟ್ ವೇರ್ ಭಾರತದಲ್ಲಿ ಫ್ಯಾಶನ್ ಪಾದರಕ್ಷೆಗಳನ್ನು ಪರಿಚಯಿಸುತ್ತಿದೆ ಹಾಗೇ ಅದರ ವ್ಯಾಪ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ಭಾರತದಲ್ಲಿನ ಮೆಟ್ರೊಗಳು, ಮಿನಿ ಮೆಟ್ರೊಗಳು,ಶ್ರೇಣಿ 1, 2 ನಗರಗಳು ಹಾಗೂ ಅದರಾಚೆಗಿನ ಸಣ್ಣ ಪಟ್ಟಣದ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುತ್ತಿದೆ.
ಕರ್ನಾಟಕದ ಬೆಂಗಳೂರಿನಲ್ಲಿ 2007ರಲ್ಲಿ ಟ್ರೆಂಡ್ಸ್ ಫುಟ್ ವೇರ್ ತನ್ನ ಚೊಚ್ಚಲ ಮಳಿಗೆಯನ್ನು ತೆರೆಯುವುದರ ಮೂಲಕ ಪ್ರಯಾಣವನ್ನು ಆರಂಭಿಸಿತು. ಇಂದು ದೇಶದ 325ಕ್ಕೂ ಹೆಚ್ಚು ನಗರಗಳಲ್ಲಿ 700ಕ್ಕೂ ಹೆಚ್ಚು ಮಳಿಗೆಗಳೊಂದಿಗೆ, ಟ್ರೆಂಡ್ಸ್ ಫುಟ್ ವೇರ್ ಭಾರತದ ನೆಚ್ಚಿನ ಪಾದರಕ್ಷೆಗಳ ಶಾಪಿಂಗ್ ತಾಣವಾಗಿದೆ.
ಇನ್ನು ತುಮಕೂರಿನಲ್ಲಿ ಟ್ರೆಂಡ್ಸ್ ಪಾದರಕ್ಷೆಗಳ ಮಳಿಗೆಯು ಆಧುನಿಕ ನೋಟ ಹಾಗೂ ಅತ್ಯಾಕರ್ಷಕ ಶ್ರೇಣಿಯನ್ನು ಹೊಂದಿದೆ. ಹಾಗೇ ಉತ್ತಮ ಗುಣಮಟ್ಟದ ಉತ್ಪನ್ನಗಳು ಈ ಪ್ರದೇಶದ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲು ದೊರೆಯಲಿದ್ದು ಎಲ್ಲಾ ಸಂದರ್ಭದಲ್ಲೂ ಕುಟುಂಬದ ಪಾದರಕ್ಷೆಗಳ ತಾಣವಾಗಿದೆ.
ಈ ವಲಯದ ಗ್ರಾಹಕರು ಟ್ರೆಂಡಿ ಪಾದರಕ್ಷೆಗಳನ್ನು ಖರೀದಿಸುವ ವಿಶಿಷ್ಟವಾದ ಹಾಗೂ ವಿಶೇಷವಾದ ಅನುಭವವನ್ನು ತಮ್ಮದಾಗಿಸಿಕೊಳ್ಳುವುದರ ಜತೆಗೆ ಮಹಿಳೆಯರು, ಪುರುಷರು, ಮಕ್ಕಳು ಕೈಗೆಟಕುವ ಬೆಲೆಯಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಎದುರು ನೋಡಬಹುದು. ಇದು ದೇಶದ ಅತಿ ದೊಡ್ಡ ಮಲ್ಟಿ ಬ್ರ್ಯಾಂಡ್ ಪಾದರಕ್ಷೆಗಳ ಮಳಿಗೆಯಾಗಿದೆ. ಇಡೀ ಕುಟುಂಬಕ್ಕಾಗಿ 20,000ಕ್ಕೂ ಹೆಚ್ಚು ಉತ್ಪನ್ನಗಳ ಶ್ರೇಣಿಯೊಂದಿಗೆ, ಭಾರತೀಯ ಹಾಗೂ ಅಂತರರಾಷ್ಟ್ರೀಯ ಪೋರ್ಟ್ ಫೋಲಿಯೊ ಹಾಗೂ ರಿಲಯನ್ಸ್ ನ ಸ್ವಂತ ಬ್ರ್ಯಾಂಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.ಟ್ರೆಂಡ್ಸ್ ಪಾದರಕ್ಷೆಯು ದೇಶದ ಅತಿದೊಡ್ಡ ಪಾದರಕ್ಷೆಗಳ ತಾಣವಾಗಿದೆ.
ತುಮಕೂರಿನ ಈ 2629 ಚದರ ಅಡಿ ಮಳಿಗೆಯು ಈ ಪ್ರದೇಶದಲ್ಲಿನ ಎರಡನೇ ಟ್ರೆಂಡ್ಸ್ ಪಾದರಕ್ಷೆಗಳ ಮಳಿಗೆಯಾಗಿದೆ. ಇದು ತನ್ನ ಗ್ರಾಹಕರಿಗೆ ವಿಶೇಷವಾದ ಉದ್ಫಾಟನಾ ಕೊಡುಗೆಯನ್ನು ನೀಡಲಿದ್ದು, ಉತ್ತಮ ಫ್ಯಾಷನ್ ಹಾಗೂ ಬೆಲೆಗಳನ್ನು ಹೊಂದಿದೆ. 2 ಉತ್ಪನ್ನಗಳನ್ನು ಖರೀದಿಸಿ ಮತ್ತೊಂದನ್ನು ಉಚಿತವಾಗಿ ಪಡೆಯಿರಿ, ಇದು ಆಯ್ದ ಶೈಲಿಗಳಿಗೆ ಅನ್ವಯವಾಗುವ ಕೊಡುಗೆ. ಉತ್ತಮ ಶಾಪಿಂಗ್ ಅನುಭವಕ್ಕಾಗಿ ಟ್ರೆಂಡ್ಸ್ ತುಮಕೂರು ಮಳಿಗೆಗೆ ಭೇಟಿಕೊಡಿ.
ಟ್ರೆಂಡ್ಸ್ ಫುಟ್ ವೇರ್ ಡಿಜಿಟಲ್ ಸ್ವತ್ತುಗಳು:
Facebook: https://www.facebook.com/TrendsFootwearOfficial
Twitter: https://twitter.com/Trends_Footwear
Instagram: https://www.instagram.com/trendsfootwearofficial/
Youtube: https://www.youtube.com/channel/UCyTl5xfFtzsqlc3_0F_BtVA/featured
Website: https://relianceretail.com/trends-footwear.html