ಚಿಕ್ಕನಾಯಕನಹಳ್ಳಿ : ಈಜಲು ಹೋದ ಯುವಕ ನೀರಿನಲ್ಲಿ ಮುಳಗಿ ಸಾವು | ವಿಶ್ವ ಕನ್ನಡಿ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಅಂಕಸಂದ್ರದ ಬಳಿ ಇರುವ ಅಣೆಗೆ ಈಜಲು ಹೋದ ದಯಾನಂದ(19) ಎಂಬ ಯುವಕನು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ.  19 ವರ್ಷದ ಈ ಯುವಕ ಕೆಂಕೆರೆ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು ಹುಳಿಯಾರು ಬಳಿಯ ಎರೇಹಳ್ಳಿ ದೊಡ್ಡನಹಟ್ಟಿಯ ವಾಸಿಯಾಗಿದ್ದು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದನು. ತಾಲ್ಲೂಕಿನಲ್ಲಿ ಕಳೆದ 5 ದಿನಗಳಿಂದ ಬಿಡದೆ ಮಳೆಯಾಗುತ್ತಿದ್ದು ಹೇಮಾವತಿ ನಾಲಾ ನೀರಿನ ಜೊತೆಯಲ್ಲಿ ಮಳೆ ನೀರು ಸೇರಿಕೊಂಡು ಅಂಕಸಂದ್ರ ಅಣೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ಹರಿಯುತ್ತಿದೆ. ಈಜಲು ಹೋದ ದಯಾನಂದ ನೀರಿನಲ್ಲಿ ಮುಳುಗಿದ್ದಾನೆ.  ದಯಾನಂದ ನ ಶವವನ್ನು ನೀರಿನಿಂದ ಹೊರತೆಗೆಯಲು ಅಗ್ನಿಶಾಮಕ ಇಲಾಖೆಯವರು ಬೋಟ್ ಮೂಲಕ ಸಂಜೆಯವರೆವಿಗೂ ಹುಡುಕುತ್ತಿದ್ದರೂ ಶವ ಇನ್ನೂ ಪತ್ತೆಯಾಗಿರಲಿಲ್ಲ. ಮಳೆ ನೀರು ರಭಸದಿಂದ ಹರಿಯುತ್ತಿದ್ದು ಶವ ಕೊಚ್ಚಿಹೋಗಿರುವ ಅನುಮಾನವಿದೆ. ಈ ಸಂಬಂದ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.