ಈ ಸಂಜೆ ಪತ್ರಿಕೆ ವರದಿಗಾರ ಚೇಳೂರು ಕುಮಾರ್ ನಿಧನ

ತುಮಕೂರು: ಈ ಸಂಜೆ ಪತ್ರಿಕೆ ತುಮಕೂರು ಜಿಲ್ಲಾ ವರದಿಗಾರ ಚೇಳೂರು ಕುಮಾರ್ ತಡ ರಾತ್ರಿ ನಿಧನರಾಗಿದ್ದರೆ, ಕುಮಾರ್ ಚೇಳೂರಿನ ತಮ್ಮ ಸ್ವಗೃಹದಲ್ಲಿ ರಾತ್ರಿ ಊಟ ಮಾಡಿ ವಿಶ್ರಾಂತಿ ತೆಗೆದುಕೊಲ್ಳುವ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, 108 ಅಂಬ್ಯುಲೇನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ಶಿವಣ್ಣ ತಿಳಿಸಿದ್ದಾರೆ. ಈ ಹಿಂದೆ ಕುಮಾರ್ ಹೃದಯ ಸಂಬಂಧಿತ ಖಾಯಿಲೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ತುಮಕೂರು ಜಿಲ್ಲೆ ಪತ್ರಕರ್ತರು ತೀವ್ರ ಸಂತಾಪ ವ್ಯಕ್ತಪಡಿದಿದ್ದಾರೆ.