ಶಿರಾ : ಪ್ರದೇಶಿಕ ಪಕ್ಷ ಜೆಡಿಎಸ್ ರಾಜ್ಯ ನೆಲೆ ಕಳೆದು ಕೊಂಡಿದೆ ಎಂದು ನಮ್ಮ ಪಕ್ಷದಿಂದ ಬೆಳೆದ ರಾಷ್ಟೀಯ ಪಕ್ಷದ ಕೇಲವು ನಾಯಕರು ಕೇಳುತ್ತಾರೆ, ಆದರೆ ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಫಿನಿಕ್ಸ್ ನಂತೆ ಗೆದ್ದು ಬರಲಿದ್ದು ಮುಂದಿನ ಸಾರ್ವತ್ರಿಕ ಚುನಾವಣರಯ ದಿಕ್ಸೂಚಿಯಾಗಲಿದೆ ಎಂದು ಜೆಡಿಎಸ್ ಪರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು. ಶಿರಾ ತಾಲೂಕಿನ ಕಾಮಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರ ಚುನಾವಣಾ ಪ್ರಚಾರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕೆಳ ಹಂತದ ಸಮುದಾಯಗಳಾದ ವಾಲ್ಮೀಕಿ, ಕುರುಬ, ಮಡಿವಾಳ, ಗೊಲ್ಲ, ಮುಸ್ಲಿಂ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದ್ದು ಈ ಹೆಚ್.ಡಿ.ದೇವೇಗೌಡ. ಮೀಸಲಾತಿ ನೀಡಿದ ಕಾರಣ ಎಲ್ಲಾ ಸಮುದಾಯಗಳು ಆರ್ಥಿಕ, ಸಾಮಾಕಜಿಕವಾಗಿ ಸಮಾಜ ಮುನ್ನಾಲೆಗೆ ಬಂದಿದ್ದಾರೆ. ಇಂತಹ ಜನಪರ ಕಾಳಜಿ ಹೊಂದಿರುವ ಜೆಡಿಎಸ್ ಪಕ್ಷ ನಿರ್ನಾಮ ಯಾವತ್ತಿಗೂ ಸಾಧ್ಯವಿಲ್ಲ ಶಿರಾ ಕ್ಷೇತ್ರದಲ್ಲಿ ಕಾರ್ಯಕರ್ತರ ಪರಿಶ್ರಮ ಸತ್ಯನಾರಾಯಣರವರ ಒಳ್ಳೆ ತನ ಅಮ್ಮಾಜಮ್ಮಗೆ ಗೆಲವು ತಂದು ಕೊಡಲಿದೆ ಎಂದರು.
ತಾವರೆಕೆರೆ ಗ್ರಾಮದಲ್ಲಿ ಆಯೋಜಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಪ್ರಸ್ತಾವಕ್ಕೆ ನಾನು ಮುಖ್ಯ ಮಂತ್ರಿಯಾಗಿದ್ದಾಗ ಮಂಜೂರಾತಿ ನೀಡಿದೆ, ಶಿರಾ ಭಗೀರಥ ಎಂದು ಹೇಳುವ ಜಯಚಂದ್ರ ಯಾವ ವೇದಿಕೆಯಲ್ಲಿ ಕರಿತಾರೋ ಅಲ್ಲೇ ಚರ್ಚೆ ಮಾಡಲು ಸಿದ್ದ ನೀರಿನ ರಾಜಕೀಯ ಶಿರಾ ಕ್ಷೇತ್ರದಲ್ಲಿ ನಡೆಯೋಲ್ಲಾ ಎಂದು ಕುಟಕಿದರು. ಶಿರಾ ತಾಲೂಕಿನ 17.ಸಾವಿರ ರೈತರ 87.ಕೋಟಿ ಸಾಲಮನ್ನಾ ಮಾಡಿದ್ದೇನೆ. 9. ತಿಂಗಳು ಕಳೆದರು ವೃದ್ಧ ಅಂಗವಿಕಲರಿಗೆ, ವಿಧುವೆಯರಿಗೆ ಮಾಸಾಶನ ಹಂ ನೀಡಲು ಸಾಧ್ಯವಿಲ್ಲ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಕೊಡಿಟ್ಟ ಹಣದಿಂದ ಮತದಾರರಲ್ಲಿ ಹಣದ ಆಮಿಷ ಒಡ್ಡಿ ಚುನಾವಣೆ ಗೆಲ್ಲಲ್ಲು ವಾಮ ಮಾರ್ಗ ಹಿಡಿದಿದೆ. ಇಂತಹ ಅಮೀಷಗಳಿಗೆ ಬಲಿಯಾಗದೆ ಆಸಕ್ತ ಮಹಿಳೆಗೆ ಕ್ಷೇತ್ರದಲ್ಲಿ ಶಕ್ತಿ ತುಂಬಲು ನಮ್ಮ ಪಕ್ಷದ ಮಹಿಳಾ ಅಭ್ಯರ್ಥಿ ಬೆಂಬಲಿಸಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಸುರೇಶ್ ಬಾಬು, ಜಿಪಂ ಸದಸ್ಯ ರಾಮಕೃಷ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಸಿ.ಆರ್.ಉಮೇಶ್, ಇಮ್ರಾನ್, ನಜ್ಮಾ, ಬೆಳ್ಳಿ ಲೋಕೇಶ್, ಶೀಲಾನಾಯಕ್ ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.