ಟಿ.ಬಿ.ಜಯಚಂದ್ರ ಗೆಲ್ತಾರೆ ಅಂದ್ರೆ ಬಲಗಡೆ ಹೂ ಕೊಡು ತಾಯಿ! | ವಿಡಿಯೋ ಸಕ್ಕತ್ ವೈರಲ್ | ವಿಶ್ವ ಕನ್ನಡಿ

ನಾಳೆ ಶಿರಾ‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ, ತುಮಕೂರಿನ ಹೆಬ್ಬೂರು ಅತಿಥಿ ಮಠದಲ್ಲಿರುವ ಹೊನ್ನಾದೇವಿ ದೇಗುಲಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹೂ ಪ್ರಸಾದ ಕೇಳಲು ದೇವರ ಮೊರೆ ಹೋಗಿದ್ದರೆ, ಜಯಚಂದ್ರ ಗೆಲ್ತಾರೆ ಅಂದ್ರೆ ಬಲಗಡೆ ಹೂ ಕೊಡು ತಾಯಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ, ಹೊನ್ನದೇವಿ ತಾಯಿ ಬಲಗಡೆ ಹೂ ನೀಡಿರುವ ವಿಡೀಯೋ ಒಂದು ಸಕ್ಕತ್ ವೈರಲ್ ಆಗಿದೆ, ಈ ಹಿಂದೆ ಸಂಸದರ ಚುನಾವಣೆಯಲ್ಲಿ ಸುಮಲತಾ ಗೆಲವಿಗೂ ಬಲಗಡೆ ಹೂ ನೀಡಿದ್ದ ಹೊನ್ನಾದೇವಿ ತಾಯಿ ಆಗಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಟಿ.ಬಿ.ಜಯಚಂದ್ರ ಗೆಲುವು ಸಾಧಿಸುತ್ತಾರೆ ಎಂದು ಆತ್ಮ ವಿಶ್ವಾಸ ಹೆಚ್ಚಾಗಿದೆ. ಆದೆನೇ ಇರಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಲ್ಲಿ ಗೆಲುವು ಯಾರಿಗೆ ಒಲಿಯುತ್ತದೆ ಎಂದು ನಾಳೆಯವರೆಗೂ ಕಾದುನೋಡಬೇಕಿದೆ.