ಈ ಸಂಬಂಧ ಶಾಸಕ ರಾಜೇಶ್ ಗೌಡ ಅವರ ಹೇಳಿಕೆಯ ವಿಡಿಯೋ ಇದೆ ನೋಡಿ ಮತ್ತು ವಿಡಿಯೋದಲ್ಲಿ ಕಾಣುವ Logo ಮೇಲೆ ಕ್ಲಿಕ್ ಮಾಡಿ ಚಾನಲ್ Subscribe ಮಾಡಿ…
ತುಮಕೂರು: ಮದಲೂರು ಕೆರೆಗೆ ನೀರು ಹರಿಸಲೇಬೇಕೆಂದು ಹೋರಾಟಕ್ಕಿಳಿದ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸಿ.ಎಂ ರಾಜೇಶ್ ಗೌಡ ಅವರು. ಶಿರಾ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಸಂಪೂರ್ಣ ಒಣ ಪ್ರದೇಶವಾಗಿದೆ ಕುಡಿಯಲು ನೀರು ಬಿಡಬೇಕೆಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಹದಿನೈದು ದಿನಗಳ ಹಿಂದೆ ಕೆಡಿಪಿ ಸಭೆಯಲ್ಲಿ ಮದಲೂರು ಕೆರೆಗೆ ನೀರು ಹರಿಸಿದ್ರೆ ಜೈಲಿಗೆ ಹಾಕಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಬಿಜೆಪಿ ಸರ್ಕಾರದ ಭರವಸೆಯನ್ನ ನಂಬಿ ಮತಹಾಕಿ ಬಿಜೆಪಿ ಅಭ್ಯರ್ಥಿ ರಾಜೇಶ ಗೌಡ ಅವರನ್ನ ಶಿರಾ ಮತದಾರರು ಗೆಲುವು ಕೊಟ್ಟಿದ್ದಾರೆ ಆದರೆ ಶಿರಾಕ್ಕೆ ನೀರು ಹರಿಸಲು ಅಡ್ಡಗಾಲು ಹಾಕಿದ್ರ ಮಾಧುಸ್ವಾಮಿ.