ಶ್ರೀಮಠದ ಹೆಸರಲ್ಲಿ ಅಪರಿಚಿತರಿಂದ ಕಾಣಿಕೆ ಸಂಗ್ರಹ | ಭಕ್ತರು ಎಚ್ಚರಿಕೆವಹಿಸಲು ರಂಗಾಪುರ ಶ್ರೀಗಳ ಮನವಿ | Vishwa kannadi

ತಿಪಟೂರು : ತಾಲೂಕಿನ ಪ್ರಸಿದ್ದ ತ್ರಿವಿಧ ದಾಸೋಹ ಕ್ಷೇತ್ರ ಕೆರೆಗೋಡಿ-ರಂಗಾಪುರ ಶ್ರೀಮಠದ ಕಾಯಕವೇ ಗ್ರಾಮೀಣ ಭಾಗದಲ್ಲಿ ಭಿಕ್ಷಾಟನೆ ಹಾಗೂ ಧಾರ್ಮಿಕ, ಸಾಮಾಜಿಕ ಕೈಂಕರ್ಯವಾಗಿದ್ದು, ಈ ವರ್ಷ ಕೊರೊನಾ ಹಾವಳಿಯ ಪರಿಣಾಮದ ಲಾಕ್‍ಡೌನ್ ನಂತರ ಯಾವುದೇ ಹಳ್ಳಿಗಳಿಂದಲೂ ಶ್ರೀಮಠದ ವತಿಯಿಂದ ಈ ವರೆಗೂ ಭಿಕ್ಷಾಟನೆ ಮಾಡಿಲ್ಲ. ಆದರೆ ಇದನ್ನೇ ಬಂಡವಾಳವಗಿಸಿಕೊಂಡಿರುವ ಕೆಲ ಅಪರಿಚಿತ ದುಷ್ಕರ್ಮಿಗಳು ಶ್ರೀಮಠದ ಹೆಸರೇಳಿಕೊಂಡು ಶ್ರೀ ಮಠದ ಹಿರಿಯ ಶ್ರೀಗಳ ಬಾವಚಿತ್ರಗಳೊಂದಿಗೆ ಶ್ರೀಮಠದ ಭಕ್ತರು ಹೆಚಾಗಿರುವ ಹಳ್ಳಿಗಳಿಗೆ ಹೋಗಿ ಕಾಣಿಕೆ ಹೆಸರಿನಲ್ಲ್ಲಿ ಹಣ, ದವಸಧಾನ್ಯ, ತೆಂಗಿನಕಾಯಿ ಇನ್ನಿತರೆ ವಸ್ತುಗಳ ರೂಪದಲ್ಲಿ ವಸೂಲಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಭಕ್ತರು ಇಂತಹ ಅಪರಿಚಿತರು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಹಾಗೂ ಶ್ರೀಮಠಕ್ಕೆ ಕೂಡಲೆ ಮಾಹಿತಿ ನೀಡಬೇಕೆಂದು ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಶ್ರೀಮಠದಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳಿಗೆ, ಮಠಕ್ಕೆ ಬರುವ ಭಕ್ತರಿಗೆ ಅನ್ನಾಶ್ರಯ, ವಿದ್ಯೆಯನ್ನು ಉಚಿತವಾಗಿ ನೀಡುತ್ತಿದೆ. ಇದಕ್ಕೆಲ್ಲಾ ತುಮಕೂರು, ಚಿಕ್ಕಮಂಗಳೂರು, ಚಿತ್ರದುರ್ಗ, ಬೆಂಗಳೂರು, ಹಾಸನ ಮತ್ತಿತರೆ ಭಾಗದ ಭಕ್ತರು ಪ್ರತೀ ವರ್ಷದ ಸುಗ್ಗೀಕಾಲದಲ್ಲಿ ನೀಡುವ ದವಸಧಾನ್ಯ, ತರಕಾರಿ, ಕಾಣಿಕೆ ಮತ್ತಿತರೆ ರೂಪದಲ್ಲಿ ನೀಡುವ ದಾನವೇ ಮುಖ್ಯವಾಗಿದೆ. ಇದನ್ನು ಕಳೆದ 6 ಹಿರಿಯ ಶ್ರೀಗಳ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಭಿಕ್ಷಾಟನೆಯೇ ಶ್ರೀಮಠದ ಕಾಯಕ ವೃತ್ತಿಯಾಗಿದ್ದು, ಮಠದ ಅಭಿವೃದ್ದಿಗೆ ಭಕ್ತರ ಸಹಕಾರ ಪ್ರೋತ್ಸಾಹವೇ ಕಾರಣವಾಗಿದೆ. ಆದರೆ ನಮ್ಮ ಮಠದ ಅಭಿವೃದ್ದಿ ಹಾಗೂ ಇಲ್ಲಿನ ಹಿರಿಯ ಶ್ರೀಗಳ ಪವಾಡಗಳನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲ ಅಪರಿಚಿತ ವ್ಯಕ್ತಿಗಳು ಕೋವಿಡ್ ಸಂಕಷ್ಟದ ನಡುವೆ ಹಳ್ಳಿ ಹಳ್ಳಿಗಳಿಗೆ ಹೋಗಿ ಶ್ರೀಮಠದ ಹೆಸರೇಳಿಕೊಂಡು ಭಕ್ತರಿಂದ ವಸೂಲಿ ಮಾಡುತ್ತಿದ್ದಾರೆ. ಆದರೆ ಶ್ರೀ ಮಠ ಮೊದಲೇ ಯವ ಹಳ್ಳಿಗಳಿಗೆ ಯಾವ ದಿನ ಭಿಕ್ಷಾಟನೆಗೆ ಬರುತ್ತೀವೆಂದು ಮೊದಲೆ ತಿಳಸಿ ನಿಗದಿಯಾದ ದಿನದಂದೇ ಬರುವುದು ವಾಡಿಕೆ ಸಂಪ್ರದಾಯವಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದ್ದು ಅಪರಿಚಿತ ವಸೂಲಿಗಾರರ ಬಗ್ಗೆ ಭಕ್ತರು ಎಚ್ಚರಿಕೆಯಿಂದರಬೇಕಲ್ಲದೆ ಅಂತಹವರು ಕಂಡು ಬಂದರೆ ಬಗ್ಗೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕಲ್ಲದೆ ಶ್ರೀಮಠಕ್ಕೂ ದೂರು ನೀಡಬೇಕೆಂದು ಶ್ರೀಗಳು ತಿಳಿಸಿದ್ದಾರೆ.s