ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ ಮತ್ತು ನಮ್ಮ ಚಾನಲ್ ನ subscribe ಮಾಡಿ.
ತುಮಕೂರು: ಬಾಳನಕಟ್ಟೆಯಲ್ಲಿ ಸಿದ್ದಿವಿನಾಕ ತರಕಾರಿ ಮಾರುಕಟ್ಟೆ ಈ ಹಿಂದೆ ಅಸ್ತಿತ್ವದಲ್ಲಿ ಇದ್ದ ಸಣ್ಣ ದೇವಸ್ಥಾನ, ಸಿದ್ಧಿವಿನಾಯಕ ಮಾರುಕಟ್ಟೆ ಜಾಗವನ್ನು ಅಭಿವೃಧಿ ಹೆಸರಿನಲ್ಲಿ ಸ್ಮಾರ್ಟ್ ಸಿಟಿ, ನಗರಪಾಲಕೆ, ವ್ಯವಸಾಯೋತ್ಪನ್ನ ಮಾರುಕಟ್ಟೆ ಇವರುಗಳಿಗೆ ಸೇರಿ ಪರಭಾರೆ ಮಾಡಲು ನಡೆಸುತ್ತಿರುವ ಹುನ್ನಾರ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣ, ಮಾರುಕಟ್ಟೆಯಲ್ಲಿರು ದೇವಸ್ಥಾನ ಅದ್ದೂರಿ ಆಡಂಬರವಿಲ್ಲದೆ ಬಡ ತರಕಾರಿ ಹಾಗೂ ಹೂವು ಹಣ್ಣು ವ್ಯಾಪಾರಿಗಳ ಭಕ್ತಿ ಭಾವನೆಗಳಿಂದ ಸ್ಥಾಪನೆಯಾದ ದೇವಸ್ಥಾನವಿದು. ಇಂತಹ ಬಡವರ ಭಕ್ತಿ ಭಾವನೆಯ ಮಂದಿರವನ್ನು ಏಕಾಏಕಿ ಯಾವುದೇ ಮಾಹಿತಿಗಳನ್ನು ನೀಡದೆ ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ಅವರು ಸ್ಥಳದಲ್ಲಿದ್ದ ಗಣೇಶ ದೇವಾಲಯವನ್ನು ಒಡೆದಿರುವುದು ಸ್ಥಳೀಯರ ಭಾವನೆಗೆ ಧಕ್ಕೆಯಾಗಿದೆ.
ವಿಧಿವತ್ತಾಗಿ ಪೂಜೆ ಪುರಸ್ಕಾರಗಳನ್ನು ಮಾಡಿ ಗರ್ಭಗುಡಿಯಲ್ಲಿನ ಪೂಜಾ ವಿಗ್ರಹವನ್ನು ನಿಯಮಾನುಸಾರ ಸ್ಥಳಾಂತರಿಸಿದ ನಂತರ ಕಟ್ಟಡ ತೆರವುಗೊಳಿಸಬೇಕು ಎಂಬ ಕನಿಷ್ಠ ಜ್ಞಾನವೂ ಆಯುಕ್ತರಿಗೆ ಇಲ್ಲ ಮತ್ತು ನಗರದಲ್ಲಿ ಸರ್ಕಾರಿ ನಿವೇಶನ, ರಸ್ತೆ, ಪಾರ್ಕ್, ರಾಜಕಾಲುವೆ ಇಂತಹ ಪ್ರದೇಶಗಳಲ್ಲಿ ಹಲವಾರು ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸಲು ಕೋರ್ಟ್ ಆದೇಶ ಇದ್ದರು ತೆರವುಗೊಳಿಸಿಲ್ಲ ಇದ್ದೆಲ್ಲ ಬಿಟ್ಟು ಸಿದ್ಧಿವಿನಾಯಕ ಮಾರುಕಟ್ಟೆ ಜಾಗವನ್ನು ಅಭಿವೃಧಿ ಹೆಸರಿನಲ್ಲಿ ಪರಭಾರೆ ಮಾಡಲು ನಡೆಸುತ್ತಿರುವುದು ಹುನ್ನಾರ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಖಂಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಯಸಿಂಹರಾವ್, ಭಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್, ನವೀನ, ಹರೀಶ, ಗಣೇಶ ಮತ್ತು ದೇವಸ್ಥಾನದ ಆರ್ಚಕರು ಇತರರು ಇದ್ದರು.