ಸ್ಮಾರ್ಟ್ಸಿಟಿ ಕನಸು ನನಸಾಗಿಲ್ಲ | ದುಂದುವೆಚ್ಚ ಕಾಮಗಾರಿ | ಮಾಜಿ ಶಾಸಕ ಡಾ.ರಫೀಕ್

ಈ ಸಂಬಂಧ ಮಾಜಿ ಶಾಸಕ ರಫೀಕ್ ಅವರ ಹೇಳಿಕೆಯ ವಿಡಿಯೋ ಇದೆ ನೋಡಿ ಮತ್ತು ವಿಡಿಯೋದಲ್ಲಿ ಕಾಣುವ Logo ಮೇಲೆ ಕ್ಲಿಕ್ ಮಾಡಿ ಚಾನಲ್ Subscribe ಮಾಡಿ


ತುಮಕೂರು: ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಸ್ಮಾರ್ಟ್ಸಿಟಿಗೆ ತುಮಕೂರು ನಗರ ಆಯ್ಕೆಯಾಗಿದ್ದು, ನಗರದಲ್ಲಿ ಇದರಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ದುಂದುವೆಚ್ಚ ಮಾಡಿ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ಮಾಜಿ ಡಾ. ಎಸ್.ರಫೀಕ್ ಅಹಮದ್ ಆರೋಪಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ 2015 ರಲ್ಲಿ ಕೇಂದ್ರ ಸರ್ಕಾರ ಸ್ಮಾರ್ಟ್ಸಿಟಿ ಯೋಜನೆಗೆ ಆಯ್ಕೆ ಮಾಡಿದ 100 ನಗರಗಳಲ್ಲಿ ತುಮಕೂರು ಸೇರಿದ್ದು, ತುಮಕೂರನ್ನು ಸುಂದರ ನಗರವಾಗಿಸುವ ಕನಸು ನನಸಾಗಿಲ್ಲ ಎಂದು ದೂರಿದರು.
ನಗರದ ನಾಗರಿಕರು ಸ್ಮಾರ್ಟ್ಸಿಟಿ ಯೋಜನೆಗೆ ತುಮಕೂರು ಆಯ್ಕೆಗೊಂಡಿದ್ದಕ್ಕೆ ಸಂತೋಷಗೊAಡಿದ್ದು, ಕಾಮಗಾರಿಗಳ ಅದ್ವಾನದಿಂದ ಬೇಸರಗೊಂಡಿದ್ದಾರೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಗಾಗಿ ಕೇಂದ್ರ ಸರ್ಕಾರ 294 ಕೋಟಿ, ರಾಜ್ಯ ಸರ್ಕಾರ 297 ಕೋಟಿ ಸೇರಿ ಒಟ್ಟು 591 ಕೋಟಿ ರೂ. ಅನುದಾನ ಬಂದಿದ್ದು, ಇದರಲ್ಲಿ 471 ಕೋಟಿ ರೂ. ಖರ್ಚಾಗಿದೆ. ಉಳಿಕೆ 120 ಕೋಟಿ ರೂ. ಹಾಗೆ ಇದೆ ಎಂದರು. ಸ್ಮಾರ್ಟ್ಸಿಟಿ ಕಾಮಗಾರಿ ಅನುಷ್ಠಾನದಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಆಧ್ಯತೆ ನೀಡಬೇಕು. ಇದನ್ನು ಬಿಟ್ಟು ಬೇರೆ ಕಡೆ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಫರೀದಾಬೇಗಂ, ಮುಖಂಡರಾದ ನಯಾಜ್ ಅಹಮದ್, ಆಟೋ ರಾಜು, ಜೆ.ಕುಮಾರ್, ಮೆಹಬೂಬ್‌ಪಾಷ, ಪುಟ್ಟರಾಜು, ಮಹೇಶ್, ಶೆಟ್ಟಳ್ಳಯ್ಯ ಮುಂತಾದವರು ಭಾಗವಹಿಸಿದ್ದರು.