ಶಿರಾ ಕ್ಷೇತ್ರದ ಜನತೆ ಹಣದ ಹಿಂದೆ ಹೋಗಲ್ಲ: ಗೌರಿಶಂಕರ್

ತುಮಕೂರು: ಶಿರಾ ಕ್ಷೇತ್ರದ ಜನತೆ ಹಣದ ಹಿಂದೆ ಹೋಗುವುದಿಲ್ಲ.ಅಭಿವೃದ್ಧಿ ಹಿಂದೆ ಹಾಗೂ ರೈತ ಪರ ಇರುವ ಜೆಡಿಎಸ್ ಪಕ್ಷದ ಪರವಾಗಿ ಇರುತ್ತಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ತಿಳಿಸಿದರು. ಶಿರಾ ತಾಲೂಕಿನ ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಶಿರಾ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರವಾಗಿ ನಿಖೀಲ್ ಕುಮಾರ್ ಜೊತೆ ಚುನಾವಣ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರು ನೆಮ್ಮದಿಯಿಂದ ಬದುಕಿದ್ದಾರೆ ಎಂದರೆ ಅದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ,ಜೆಡಿಎಸ್ ಪಕ್ಷ ಹಣದಿಂದ ಅಧಿಕಾರ ನೆಡೆಸಿಲ್ಲ.ಅಭಿವೃದ್ಧಿಯ ಕಾರ್ಯಗಳನ್ನು ಮಾಡುವ ಮೂಲಕ ಜನರ ಮುಂದೆ ಬಂದು ನಿಂತಿದೆ ಎಂದರು. ಶಿರಾ ತಾಲೂಕಿನಲ್ಲಿ ದಿವಂಗತ ಶಾಸಕ ಬಿ.ಸತ್ಯನಾರಾಯಣರವರು ಮೈತ್ರಿ ಸರಕಾರದಲ್ಲಿ ಶಿರಾ ತಾಲೂಕಿನ ಕುಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಹಿಂದುಳಿದ ಹಳ್ಳಿಗಳಿಗೆ 50 ಲಕ್ಷಕ್ಕಿಂತ ಹೆಚ್ಚಿನ ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

ನಿಜಕ್ಕೂ ಸತ್ಯ ನಾರಾರಣರವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಣ್ಣು ತುಂಬಿಕೊಳ್ಳಬಹುದು.ಶಿರಾ ತಾಲೂಕಿನಲ್ಲಿ 40 ವರ್ಷಗಳಿಂದ ಸರಕಾರಿ ಗೋಮಾಳದಲ್ಲಿ ಉಳುಮೆ ಮಾಡಿಕೊಂಡು ವ್ಯವಸಾಯ ವೃತ್ತಿ ಅನುಸರಿಸಿದ ರೈತರ ಕಷ್ಟಗಳನ್ನು ನೋಡಿ, ಅಗತ್ಯವಿರುವ ಫಲಾನುಭವಿಗಳಿಗೆ ಒಟ್ಟು 17 ಸಾವಿರ ಜನರಿಗೆ ಹಕ್ಕು ಪತ್ರ ನೀಡುವ ಮೂಲಕ ಸಾಗುವಳಿಯನ್ನು ನೀಡಿದ್ದಾರೆ ಇವರು ಕಾರ್ಯಕ್ಕೆ ಇಡೀ ಶಿರಾ ಕ್ಷೇತ್ರವೆ ತಲೆಬಾಗಿ ನಿಂತಿದೆ ಎಂದರು. ರಾಜ್ಯದ ಜನತೆಯ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಇಂದು ಶಿರಾದ ಜನತೆ ನೋಡಬೇಕಿದೆ.ಕುಮಾರಣ್ಣ ಮುಖ್ಯಮಂತ್ರಿ ಆಗಿದ್ದಾಗ ಶಿರಾ ತಾಲೂಕಿನ ರೈತರ 87 ಸಾವಿರ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡಿದ್ದಾರೆ.ಅದರ ಜೊತೆಗೆ ವೃದ್ಧಾಪ್ಯ ವೇತನ ಹೆಚ್ಚಳ ಮಾಡಿದ್ದಾರೆ.ಇನ್ನು ಹಲವಾರು ಯೋಜನೆಗಳನ್ನು ಜಾರಿ ಮಾಡಿರುವ ಕುಮಾರಣ್ಣನವರ ಕುಟುಂಬ ಇಂದು ಸತ್ಯಣ್ಣರವರ ಕುಟುಂಬದ ಜೊತೆ ಎಗಲು ಕೊಟ್ಟು ನಿಂತಿದೆ ಎಂದರು. ಶಾಸಕ ಸತ್ಯ ನಾರಾಯಣರವರ ಅಕಾಲಿಕ ಮರಣದ ನಂತರ ಶಿರಾ ಕ್ಷೇತ್ರದ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಜಾತಕ ಪಕ್ಷಿಗಳಂತೆ ಕಾದು ಕುಳಿತಿವೆ.ಆದರೆ ಅಸಾಯಕತೆಯ ಸ್ಥೀತಿಯಲ್ಲಿರುವ ಸತ್ಯಣ್ಣನವರ ಧರ್ಮ ಪತ್ರಿ ಅಮ್ಮಾಜಮ್ಮನವರ ಜೊತೆ ದೇವೇಗೌಡರು,ಮಕ್ಕಳು ಮತ್ತು ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ, ನಿಖೀಲ್ ಕುಮಾರಸ್ವಾಮಿ ಬಂದಿದ್ದಾರೆ.ಶಿರಾದ ನಾಲ್ಕು ದಿಕ್ಕುಗಳಲ್ಲೂ ದೇವೇಗೌಡರ ಕುಟುಂಬ ಚುನಾವಣೆಯ ಪ್ರಚಾರ ಮಾಡುತ್ತಿದೆ.ಆದರೆ ಜೆಡಿಎಸ್‍ನ ಅಭ್ಯರ್ಥಿ ಪರ ಇಷ್ಟೇಲ್ಲಾ ಶಕ್ತಿಗಳಿರುವಾಗ ಶಿರಾ ಭದ್ರಕೋಟೆಯನ್ನು ಬೇರೆ ಯಾರು ಬೇದಿಸಲು ಬಿಡುವುದಿಲ್ಲ.ಶಿರಾ ಜೆಡಿಎಸ್‍ನ ಭದ್ರಕೋಟೆಯನ್ನಾಗಿ ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ನಿಖೀಲ್ ಕುಮಾರಸ್ವಾಮಿ ಮಾತನಾಡಿ,ಜೆಡಿಎಸ್ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮನವರಿಗೆ ಮತ ನೀಡುವಂತೆ ಯುವಕರು,ಹಿರಿಯರಿಗೆ ಮನದಟ್ಟು ಮಾಡಬೇಕು,ಜೆಡಿಎಸ್ ಪಕ್ಷ ಬಡವರ ಪರವಾಗಿರುವ ಪಕ್ಷ ಆದ ಕಾರಣ ಇಲ್ಲಿ ಬಡವರೆ ರಾಜಕಾರಣ ಮಾಡುತ್ತಿದ್ದಾರೆ.ಈ ಗಾಗಲೇ ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಡಿ.ಸಿ ಗೌರಿಶಂಕರಣ್ಣ ಭರ್ಜರಿ ಚುನಾವಣ ಪ್ರಚಾರ ಮಾಡಿದ್ದಾರೆ.ಜೊತೆಗೆ ಕುಮಾರಣ್ಣನವರ ಸರಕಾರದ ಅವಧಿಯಲ್ಲಿ ಏನೆಲ್ಲಾ ಕಾರ್ಯಗಳನ್ನು ಮಾಡಿದ್ದಾರೆ ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ.ಎಲ್ಲರೂ ಜೆಡಿಎಸ್‍ನ ಅಭ್ಯರ್ಥಿ ಪರ ಮತದಾನ ಮಾಡುವಂತೆ ಕರೆ ನೀಡಿದರು. ದೊಡ್ಡ ಆಲದಮರ,ಕಾರ್ಪೆಹಳ್ಳಿ,ಚಿಕ್ಕದಾಸರಹಳ್ಳಿ,ಕಳ್ಳಂಬೆಳ್ಳ,ನರಸಮ್ಮಜ್ಜಿ ಕಟ್ಟೆ,ಕೆಂಚಾಗನಹಳ್ಳಿ,ಮಲ್ಲಶೆಟ್ಟಿಹಳ್ಳಿ,ಕಠಾರವೀರನಹಳ್ಳಿ,ಮುದಿಮಡು,ನಿಜ್ಜಯ್ಯನಪಾಳ್ಯ,ಲಕ್ಕನಹಳ್ಳಿ ಗೊಲ್ಲರಹಟ್ಟಿ,ಹಂಡೇ ಚಿಕ್ಕನಹಳ್ಳಿ,ಯಲದಬಾಗಿ,ಅಮಲಗೊಂದಿ,ಹಾವಿನಾಳ್ ಬೋರನಸಂದ್ರ,ತಿಪ್ಪನಹಳ್ಳಿ ಮುಂತಾದ ಕಡೆ ಚುನಾವಣ ಪ್ರಚಾರ ಕೈಗೊಳ್ಳಲಾಯಿತು. ಈ ಸಂದರ್ಭಲ್ಲಿ ತುಮಕೂರು ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಹಾಲನೂರು ಅನಂತಕುಮಾರ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.