ವ್ಯಾಪಕ ಭದ್ರತೆಗೆ ಕೇಂದ್ರದ 3 ಭದ್ರತಾ ಕಂಪನಿಯ ಸಿಬ್ಬಂದಿಗಳ ನಿಯೋಜನೆ: ಎಸ್ಪಿ ಡಾ.ವಂಶಿಕೃಷ್ಣ

ತುಮಕುರು; ಶಿರಾ ಉಪಚುನಾವಣೆಯ ಶಾಂತಿಯುತ ಮತದಾನಕ್ಕೆ 2 ಡಿವೈಎಸ್‍ಪಿ, 5 ಮಂದಿ ಇನ್ಸ್‍ಪೆಕ್ಟರ್, 21 ಪಿಎಸ್‍ಐ, 19 ಎಎಸ್‍ಐ ಸೇರಿದಂತೆ 900ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮತ್ತು 3 ಸೆಂಟ್ರಲ್ ಆರ್ಮಡ್ ಪೋರ್ಸ್  ಸೇರಿ 270 ಮಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ.ವಂಶಿಕೃಷ್ಣ ತಿಳಿಸಿದರು.

ಕೇಂದ್ರದ 3 ಭದ್ರತಾ ಸಿಬ್ಬಂದಿಗಳ ಕಂಪನಿಗಳು ಭದ್ರತೆಗೆ ಆಗಮಿಸಿದ್ದು, ಹೋಬಳಿವಾರು 5 ಇನ್ಸ್‍ಪೆಕ್ಟರ್‍ಗಳ ತಂಡ ರೌಂಡ್ಸ್‍ನಲ್ಲಿರಲಿದೆ. ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ತಾಲ್ಲೂಕಿನಾದ್ಯಂತ  ನವೆಂಬರ್ 3ರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಈ ಆದೇಶವು ನವೆಂಬರ್ 3ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಮತದಾನ ಕೇಂದ್ರಗಳ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.