ಶಿರಾ ಉಪ ಚುನಾವಣೆ ಬಿಜೆಪಿಗೆ ಗೆಲುವಿನ ಸಂಭ್ರಮ? | ವಿಶ್ವ ಕನ್ನಡಿ

ತುಮಕೂರು:ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ  ಶಿರಾ ಉಪಚುನಾವಣ ಕಣವೀಗ ಬಿಜೆಪಿಯ ಗೆಲುವಿನ ಸಂಭ್ರಮದಲ್ಲಿ.ಮೊದಲನೇ ಸುತ್ತಿನಿಂದಲೂ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುನ್ನಡೆ ಸಾಧಿಸುತ್ತಲೇ ಬಂದಿದ್ದು, ಹನ್ನೆರಡನೇ ಸುತ್ತು ಮುಗಿದಿದ್ದು, ಹನ್ನೊಂದನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿಗೆ ಗೆಲುವು ಖಚಿತವಾಗಲಿದೆ ಎಂಬ ಹಿನ್ನಲೆಯಲ್ಲಿ ಕಾರ್ಯಕರ್ತರಲ್ಲಿ ಗೆಲುವಿನ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಕುಣಿದು ಕುಪ್ಪಳಿಸುತ್ತಿರುವ ಬಿಜೆಪಿ ಕಾರ್ಯಕರ್ತರು ಗೆಲುವಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕೊನೆ ಸುತ್ತಿನವರೆಗೂ ಗೆಲುವು ಯಾರ ಮುಡಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.