ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಇಂದಿನ ಪ್ರವಾಸದ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ | ವಿಶ್ವ ಕನ್ನಡಿ

ತುಮಕೂರು: ಕೇಂದ್ರದಲ್ಲಿ ಸಚಿವರಾದ ಬಳಿಕ ಇದೇ ಬಾರಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಎ. ನಾರಾಣಸ್ವಾಮಿ ಅವರ ಜನಾಶೀರ್ವಾದ ಯಾತ್ರಗೆ ಅದ್ದೂರಿ ಸ್ವಾಗತ ದೊರಕಿತು.

ತುಮಕೂರಿನ ಜಾಸ್ ಟೋಲ್ ಜಿಲ್ಲಾ ಬಿಜೆಪಿ ಘಟಕದಿಂದ ಬಳಿ ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಿದರು. ಸೋಮನ ಕುಣಿತ, ಕಹಳೆಯ ಜನಪದ ಸದ್ದು ನಾರಾಯಣಸ್ವಾಮಿ ಅವರ ಸ್ವಾಗತಕ್ಕೆ ಮೆರಗು ತಂದಿತು.

ಸಮುದಾಯದ ಮುಖಂಡರು ಹಾರ-ತುರಾಯಿ ಹಾಕಿ ಸಂಭ್ರಮಿಸಿ ಘೋಷಣೆ ಮೊಳಗಿಸಿದರು. ಮಹಿಳೆಯರು ನಾರಾಯಣ ಸ್ವಾಮಿ ಅವರಿಗೆ ಸ್ವಾಗತ ಕೋರಿದರು.

ಬಳಿಕ ಸಿದ್ಧಗಂಗಾ ಮಠಕ್ಕೆ ತೆರಳಿ, ಲಿಂ.ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಬಳಿಕ ನಗರದ ಮಹಾಲಕ್ಷ್ಮಿ ನಗರದ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದ ನರಸಿಂಹಮೂರ್ತಿ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಅಲ್ಲಿಂದ ಎಸ್ಐಟಿ ಬಡಾವಣೆ ನ್ಯಾಯಬೆಲೆ ಅಂಗಡಿಗೆ ಭೇಟಿ ಫಲಾನುಭವಿಗಳಿಗೆ ಪಡಿತರ ವಿತರಿಸಿದರು.

ಬಳಿಕ ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕಾಭಿಯಾನ ವೀಕ್ಷಿಸಿದರು.