ತುಮಕೂರು: ಸಚಿವ ಎಸ್.ಟಿ.ಸೋಮಶೇಕರ್ ಮತ್ತು ನೂತನ ಶಾಸಕ ಮುನಿರತ್ನ ನಡುವೆ ರಾಜಕೀಯ ಅಂತರ ಕಾಣುತ್ತಿದೆ ಎಂಬ ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೇಗೆ ಉತ್ತರಿಸಿದ ಸಚಿವ ಎಸ್.ಟಿ.ಸೋಮಶೇಕರ್ ನಮ್ಮ ನಡುವೆ ಯಾವುದೇ ಅಂತರ ಇಲ್ಲ ನಾವು ಮೂರು ಜನ ಒಂದೇ ಎಸ್ ಬಿ ಎಂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಕೂಡ ಇಲ್ಲ, ಮುನಿರತ್ನ ಅವರ ವಿಧಾನಸಭಾ ಕ್ಷೇತ್ರನೇ ಭೇರೆ ನಮ್ಮ ವಿಧಾನಸಭಾ ಕ್ಷೇತ್ರನೇ ಬೇರೆ. ನಮ್ಮ ಮೂವರನ್ನ ಮೊದಲು ಎಸ್ ಬಿ ಎಂ ಅಂತ ಹೇಳ್ತಾಯಿದ್ರು ನಾವು ಇಬ್ಬರು ಚುನಾವಣೆ ನಿತ್ತು ಗೆದ್ದ ಮೇಲೆ ಎಸ್ ಬಿ ಎಂದು ಕರೆದ್ರು ಈಗ ಮುನಿರತ್ನ ಕೂಡ ಸೇರಿಕೊಳ್ತಾರೆ, ಅವರು ಬಂದರೆ ಹಿಂದೆ ಹೆಗಿತ್ತು ಎಸ್ ಬಿ ಎಂ ತರನೆ ಇರುತ್ತೆವೆ ಎಂದು ತಿಳಿಸಿದರು.
ಮುನಿರತ್ನಗೆ ಸಚಿವ ಸ್ಥಾನ ಕೂಡುವ ವಿಚಾರಕ್ಕೆ, ಮುಖ್ಯಮಂತ್ರಿಗಳು ಇದುವರೆಗೂ ಮಾತಿಗೆ ತಕ್ಕಂತೆ ನಡೆದುಕೊಂಡಿದರೆ, ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಟ್ಟಿದ್ದರೆ ಸೋತವರಿಗೂ ಎಂಎಲ್ಸಿ ಮಾಡಿದ್ದರೆ, ಇನ್ನು ಉಳಿದವರಿಗೆ ಏನು ಮಾಡಬೇಕು ಎಂಬ ವಿಚಾರ ಮುಖ್ಯಮಂತ್ರಿಗಳಿಗೆ ಗೋತ್ತಿದೆ. ಅದರ ಪ್ರಕಾರ ನಡೆದುಕೊಳ್ಳುತ್ತಾರೆ ಎಂದು ಸಚಿವ ಎಸ್.ಟಿ.ಸೋಮಶೇಕರ್ ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮವನ್ನ ಮೂಗಿಸಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು ಜೊತೆಗೂಡಿ ಸಚಿವ ಎಸ್.ಟಿ.ಸೋಮಶೇಕರ್ ಇಂದು ಸಂಜೆ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಅಶೀರ್ವಾದ ಪಡೆದುರು.