Vishwa Kannadi - Newspaper | News Website | Digital Channel
ಓದುವುದು, ನೋಡುವುದು, ಕೇಳುವುದೆಲ್ಲ ಸುದ್ದಿ ಮಾಡಲಾಗದು | Vishwa kannadi | VISHWA KANNADI

ಓದುವುದು, ನೋಡುವುದು, ಕೇಳುವುದೆಲ್ಲ ಸುದ್ದಿ ಮಾಡಲಾಗದು | Vishwa kannadi

ಸಾಮಾಜಿಕ ಜಾಲತಾಣ ಮಾಧ್ಯಮಗಲ್ಲಿನ ಮಾಹಿತಿ ಮತ್ತು ಸುದ್ದಿಗಳ ಮೂಲ, ವಾಸ್ತವಿಕತೆ, ವಿಶ್ವಾಸಾರ್ಹತೆಯನ್ನು ಅರಿತುಕೊಳ್ಳದೇ ಅವುಗಳನ್ನು ಪ್ರಕಟಿಸುತ್ತಿರುವುದರಿಂದ ಸಮಾಜದಲ್ಲಿ ಮಾಧ್ಯಮಗಳ ಬಗ್ಗೆ ನಂಬಿಕೆ ಕುಸಿಯುತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕರುಡಾ.ಎಂ.ಎಸ್. ಸಪ್ನ ಅವರು ಅಭಿಪ್ರಾಯಪಟ್ಟರು.

ನಗರದಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್‍ನ ಶ್ರೀ ಸಿದ್ಧಾರ್ಥ ಮಾದ್ಯಮ ಅಧ್ಯಯನ ಕೇಂದ್ರದಲ್ಲಿ ಇಂಡಿಯನ್ ಮೀಡಿಯಾ ಲಿಟ್ರೆಸಿ ನೆಟ್‍ವರ್ಕ್ ಸಂಸ್ಥೆ (ಫ್ಯಾಕ್ಟ್‍ಶಾಲಾ) ಸಂಯುಕ್ತವಾಗಿ ಏರ್ಪಡಿಸಿದ್ದ ‘ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ನಕಲಿ ಸುದ್ದಿಗಳ ಪರಾಮರ್ಶೆ‘ಕುರಿತು ಆನ್ ಲೈನ್‍ಕಾರ್ಯಗಾರದಲ್ಲಿ ಮಾತನಾಡಿದ ಅವರು, ಓದುವುದು, ನೋಡುವುದು ಮತ್ತು ಕೇಳುವುದೆಲ್ಲವನ್ನು ಸುದ್ದಿ ಮಾಡಲಾಗದು. ಅದರಲ್ಲಿ ವಾಸ್ತವಿಕತೆ ಮತ್ತು ವಿಶ್ವಾರ್ಹತೆಗಳಿದ್ದಾಗ ಮಾತ್ರ ಸಮಾಜಕ್ಕೆಉತ್ತಮ ಸುದ್ದಿಯಾಗುತ್ತದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಲ್ಲಿ ಸುದ್ದಿಗಳು ಹೇಗೆ ನಕಲಿಯಾಗುತ್ತಿವೆ ಮತ್ತು ಹೇಗೆವಿಕೃತಗೊಳಿಸಲಾಗುತ್ತಿದೆ ಎಂಬುದನ್ನುಉದಾಹರಣೆ ಸಹಿತ ವಿವರಿಸಿದ ಅವರು, ಆಧುನಿಕಕಾಲಘಟ್ಟದಲ್ಲಿಯೂಮಾದ್ಯಮಗಳಲ್ಲಿ ಸುದ್ದಿಯ ಸತ್ಯಾಂಶ ತಿಳಿಯದೆ ಸುದ್ದಿಗಳನ್ನು ಬಿತ್ತರಿಸುವುದನ್ನು ನಾವು ಕಾಣುತ್ತಿದ್ದೇವೆ. ಈ ಪ್ರವೃತ್ತ ವಿದ್ಯುನ್ಮಾನ ಮತ್ತು ಸಾಮಾಜಿಜಾಲತಾಣ ಮಾಧ್ಯಮಗಳಲ್ಲಿ ಮಿತಿ ಮೀರಿದೆಎಂದರು.
ಇತ್ತೀಚಿನ ದಿನದಲ್ಲಿ ಮಾಹಿತಿ-ಸುದ್ದಿಗಳನ್ನು ತಿರುಚಲಾಗುತ್ತಿದೆ.ಈ ಬಗ್ಗೆ ಜಾಗೃತಿ-ಅರಿವು ಹೆಚ್ಚಾಗಬೇಕು. ಸಮಾಜಕ್ಕೆ ಮಾರಕವಾಗುವ ಮಾಹಿತಿಯನ್ನು ಪ್ರಸಾರ ಮಾಡುವಾಗಅದರ ಪೂರ್ವಾಪರಗಳನ್ನು ಪತ್ತೆಹಚ್ಚುವ ಹೋಣೆಗಾರಿಕೆ ಮತ್ತು ಜವಾಬ್ದಾರಿ ಪತ್ರಿಕೋದ್ಯಮ
ಜಾ¯ತಾಣ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಜನ ಸಾವಿಗೂ ಕಾರಣವಾಗುವ ಹಂತದಲ್ಲಿ ನಾವಿದ್ದೇವೆ. ಆದ್ದರಿಂದ ಈ ಮಾಧ್ಯಮಗಳ ಮೇಲೆ ನಿಯಂತ್ರಣತರುವಅಗತ್ಯತೆ ಮತ್ತು ಅನಿವಾರ್ಯತೆ ಇಂದಿನದಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸುವ ಸಾರ್ವಜನಿಕರು ಸುದ್ದಿ-ಮಾಹಿತಿಗಳ ವಾಸ್ತವಿಕತೆಅರಿಯದೆಅದನ್ನುಇನ್ನೋಬ್ಬರಿಗೆರವಾನಿಸುವ ಪ್ರವೃತ್ತಿ ಬಿಡಬೇಕುಎಂದುಡಾ.ಎಂ.ಎಸ್. ಸಪ್ನಕರೆ ನೀಡಿದರು.
ಗೂಗಲ್ ಮೀಟ್ ಮೂಲಕ ಸುಮಾರುಎರಡು ಗಂಟೆಗಳ ಕಾಲ ನಡೆದಈಕಾರ್ಯಕ್ರಮದಲ್ಲಿÀ ಶ್ರೀ ಸಿದ್ಧಾರ್ಥ ಮಾದ್ಯಮಅಧ್ಯಯನಕೇಂದ್ರದ ನಿರ್ದೇಶಕರಾಡಾ.ಬಿ.ಟಿ. ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ.ಯು.ಡಿ.ನಾಗೇಂದ್ರ, ಜ್ಯೋತಿ ಸಿ, ಶ್ವೇತಎಮ್.ಪಿ. ವಿಜಯ್ ಕೃಷ್ಣ, ರೂಪ ಕೆ, ಮನೋಜಕುಮಾರಿ ಬಿ, ಪರ್ತಕರ್ತರಾದಗಂಗಾವತಿ ವಸಿಗೇರಪ್ಪಸೇರಿದಂತೆ ಮಾದ್ಯಮ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

error: Content is protected !!