ಆಹ್ವಾನ ಸುದ್ದಿ: ತುಮಕೂರುನಲ್ಲಿ ಪತ್ರಿಕಾ ದಿನಾಚರಣೆ | ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ಮತ್ತು ದಿನಸಿ ಕಿಟ್ ವಿತರಣೆ | ವಿಶ್ವ ಕನ್ನಡಿ

ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಘಟಕ ತುಮಕೂರು ವತಿಯಿಂದ ನಗರದ ಬಾಲಭವನದಲ್ಲಿ ದಿ:20-07-2021 ರಂದು ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ, ಕಾರ್ಯಕ್ರಮದ ಉದ್ಘಾಟನೆ, ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಜಿ.ಪರಮೇಶ್ವರ ಅವರು ಉದ್ಘಾಟಿಸಿ, ನಂತರ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ಮತ್ತು ದಿನಸಿ ಕಿಟ್ ವಿತರಣೆ ಮಾಡಲಿದ್ದಾರೆ.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಚಿ.ನಿ.ಪುರುಷೋತ್ತಮ್ ವಹಿಸಲಿದ್ದಾರೆ, ಕಾರ್ಯಕ್ರಮಕ್ಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ರಂಗರಾಜು, ಪದಾಧಿಕಾರಿಗಳು ಮತ್ತು ನಿರ್ದೇಶಕರು ಸ್ವಾಗತಿಸಲಿದ್ದಾರೆ. ಈ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮಕ್ಕೆ ಜಿಲ್ಲೆಯ ನಗರ, ಮತ್ತು ಎಲ್ಲಾ ತಾಲ್ಲೂಕಿನ ಪತ್ರಕರ್ತರು ಭಾಗವಹಿಸಲು ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಮನವಿ ಮಾಡಿದ್ದಾರೆ.

ಪತ್ರಿಕಾ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಡಾ.ಜಿ.ಪರಮೇಶ್ವರ್ ಅವರನ್ನ ಆಹ್ವಾನಿಸಲು ಇಂದು ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಎನ್.ಡಿ.ರಂಗರಾಜ್, ನಿರ್ದೇಶಕರುಗಳಾದ ಸತೀಶ ಹಾರೋಗೆರೆ, ಸಿ.ಎಸ್. ಕುಮಾರ್, ಸಿ.ರಂಗನಾಥ್ ಇತರರು ಅತಿಥಿಗಳನ್ನು ಆಹ್ವಾನಿಸಿದರು.