Vishwa Kannadi - Newspaper | News Website | Digital Channel
ವಿದ್ಯುತ್ ಪೂರೈಕೆ: ರಾಜ್ಯ ಮತ್ತು ದೇಶ ಆರ್ಥಿಕ ಸುಧಾರಣೆಗೆ ಸಹಕಾರಿಯಾಗುತ್ತಿದೆ: ಡಾ.ಜಿ.ಪರಂ | ವಿಶ್ವ ಕನ್ನಡಿ | VISHWA KANNADI

ವಿದ್ಯುತ್ ಪೂರೈಕೆ: ರಾಜ್ಯ ಮತ್ತು ದೇಶ ಆರ್ಥಿಕ ಸುಧಾರಣೆಗೆ ಸಹಕಾರಿಯಾಗುತ್ತಿದೆ: ಡಾ.ಜಿ.ಪರಂ | ವಿಶ್ವ ಕನ್ನಡಿ

ತುಮಕೂರು:  ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಪವನ ಶಕ್ತಿ, ಸೌರಶಕ್ತಿ ಮತ್ತು ಜಲವಿದ್ಯುತ್ ಉತ್ವಾದನೆಯಲ್ಲಿ ಕ್ರಾಂತಿಕಾರ ಪ್ರಗತಿಯನ್ನು ಸಾಧಿಸಿದ್ದರಿಂದ ಗ್ರಾಮೀಣ ಪ್ರದೇಶ ಸೇರಿದಂತೆ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರ ಸರಬರಾಜಾಗುತ್ತಿರುವ ವಿದ್ಯುತ್ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬರುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರ ಅವರು ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿಂದು ಎಲೆಕ್ಟ್ರೀಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಏರ್ಪಡಿಸಲಾಗಿದ್ದ ‘ ವಿಜಿಎಸ್‍ಟಿ ಪ್ರಾಯೋಜಿತ ಸಂಶೋಧನಾ ಪ್ರಯೋಗಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ 20 ವರ್ಷದ ಹಿಂದೆ ರಾಜ್ಯದಲ್ಲಿ ಅತೀವವಾದ ವಿದ್ಯುತ್ ಕ್ಷಾಮ ತಲೋದೋರಿತ್ತು. ಆದರೆ ಈಗ ರಾಜ್ಯದಲ್ಲಿ 15 ಸಾವಿರ ಮೆಗಾ ವ್ಯಾಟ್ ನಷ್ಟು ವಿದ್ಯುತ್ ಉತ್ವಾದನೆಯಾಗುತ್ತಿದ್ದು, 12 ಸಾವಿರ ಮೆಗಾ ವ್ಯಾಟ್ ಬಳಕೆಯಾಗುತ್ತಿದ್ದು, ಇತರೆ ರಾಜ್ಯಗಳಿಗೆ ಪೂರೈಕೆ ಮಾಡುವ ಸಾವiಥ್ರ್ಯ ಬೆಳೆಸಿಕೊಂಡಿದ್ದೇವೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನಾ ಆಯೋಗಗಳು ವಿದ್ಯುತ್ ಉತ್ವಾದನೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಬಜೆಟ್ ನಲ್ಲಿ ಹೆಚ್ಚಿನ ಹಣಕಾಸು ನೆರವು ನೀಡದ್ದರಿಂದ ಸಾಧ್ಯವಾಯಿತು ಎಂದರು.

ಕೈಗಾರಿಕೆ, ಕೃಷಿವಲಯ ಸೇರಿದಂತೆ ಅಗತ್ಯವಲಯಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಿದ್ದರಿಂದ ಉತ್ವಾದನೆ ಹೆಚ್ಚಾಗಿದೆ. ರಾಜ್ಯ ಮತ್ತು ದೇಶ ಆರ್ಥಿಕ ಸುಧಾರಣೆಗೆ ಸಹಕಾರಿಯಾಗುತ್ತಿದೆ ಎಂದು ವಿಶ್ಲೇಷಿದ ಅವರು, ಯುರೋಪ್‍ನಂತ ಮುಂದುವರಿದ ದೇಶದಲ್ಲಿ ವಿದ್ಯುತ್ ಉತ್ವಾದನೆಗೆ ಅಳವಡಿಸಿಕೊಳ್ಳುತ್ತಿರುವ ತಂತ್ರಜ್ಞಾನವನ್ನು, ನಮ್ಮ ದೇಶದಲ್ಲಿ ದೊರೆಯುತ್ತಿರುವ ಸಂಪನ್ಮೂಲಗಳೊಂದಿಗೆ ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ತಾಂತ್ರಿಕ ಸಂಶೋಧನೆಗಳು ನಡೆಯಬೇಕಿದೆ ಎಂದು ಡಾ.ಜಿ.ಪರಮೇಶ್ವರ ಅವರು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *

error: Content is protected !!