ಪೊಲೀಸ್ ಇಲಾಖೆಯಲ್ಲಿ ತರಲಾಗದೇ ಇದ್ದ ಬದಲಾವಣೆ ತರಲು ಪ್ರಯತ್ನಿಸುತ್ತೇನೆ : ಗೃಹ ಮಂತ್ರಿ ಆರಗ ಜ್ಞಾನೇಂದ್ರ

ಈ ಸಂಬಂಧ ಗೃಹ ಸಚಿವ ಅರಗ ಜ್ಞಾನೇಂದ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಹೇಳಿಕೆಯ ವಿಡಿಯೋ ಇದೆ ನೋಡಿ…


ತುಮಕೂರು ಬ್ರೇಕಿಂಗ್ ನ್ಯೂಸ್:

ಸಿದ್ಧಗಂಗಾ ಮಠದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ.

ಶ್ರೀ ಶಿವಕುಮಾರ ಸ್ವಾಮೀಜಿಯ ಗದ್ದುಗೆಗೆ ನಮಸ್ಕರಿಸಿ ಹೇಳಿಕೆ.

ನಾಳೆ ಗೃಹ ಇಲಾಖೆ ಅಧಿಕಾರಗಳ ಜೊತೆ ‌ಮೊದಲ ಸಭೆ ನಡೆಸಲಿದ್ದೇನೆ.

ಆ ಮೂಲಕ ಅಧಿಕೃತವಾಗಿ ಚಾರ್ಜ್ ವಹಿಸಿಕೊಳ್ಳಲಿದ್ದೇನೆ.

ಅದಕ್ಕೂ ಮುಂಚೆ ಸಿದ್ದಗಂಗಾ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದೇನೆ.

ಸಂಘಟನೆ, ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಸೇರಿ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ.

ಪೊಲೀಸ್ ಇಲಾಖೆ ಸಶಕ್ತವಾಗಿ ಕೆಲಸ ಮಾಡುವ ಹಾಗೆ ಶಕ್ತಿ ತುಂಬಬೇಕು
ಎಂದು ಯೋಚನೆ ಮಾಡಿದ್ದೇನೆ.

ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಇಲಾಖೆಯಲ್ಲಿ ಇಷ್ಟು ವರ್ಷ ತರಲಾಗದೇ ಇದ್ದ ಏನಾದರೊಂದು ಬದಲಾವಣೆ ತರಲು ಪ್ರಯತ್ನ ಮಾಡುತ್ತೇನೆ.

ಔರಾದ್ಕರ್ ವರದಿ ಅಧ್ಯಯನ ಮಾಡಿ ಪೊಲೀಸರಿಗೆ ಅನುಕೂಲ ಮಾಡಿಕೊಡಲಾಗುವುದು.

ಖಾತೆ ಹಂಚಿಕೆಯಲ್ಲಿ ಅಸಮಾಧಾನ ಸಹಜ.

ಎಲ್ಲಾ ಸರ್ಕಾರದಲ್ಲಿ ಅದು ಸಹಜ.

ಸಿಎಂ ಬೊಮ್ಮಯಿ ಚಾಣಾಕ್ಷರಿದ್ದಾರೆ…ಅವರು ಈ ಗೊಂದಲವನ್ನು ನಿಭಾಯಿಸುತ್ತಾರೆ.

ನಾನೂ ಕೂಡ ಯಾವುದೇ ಖಾತೆ ಬೇಕಂತ ಬೇಡಿಕೆ ಇಟ್ಟಿರಲಿಲ್ಲ.

ನನ್ನ ಮೇಲೆ ಭರವಸೆ ಇಟ್ಟು ಹಿರಿಯವರು ಗೃಹ ಖಾತೆ ಕೊಟ್ಟಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ.

Leave a Reply

Your email address will not be published. Required fields are marked *