ವಿದ್ಯುತ್ ಖಾಸಗೀಕರಣ ವಿರೋಧ | ಡೀಸಿ ಕಛೇರಿ ಬಳಿ ಮೀಟರ್ ಸುಟ್ಟು ಪ್ರತಿಭಟನೆ | ವಿಶ್ವ ಕನ್ನಡಿ

ಈ ಸಂಬಂಧ ವಿಡಿಯೋ ಇದೆ ನೋಡಿ…

ತುಮಕೂರು: ವಿದ್ಯುತ್ ಖಾಸಗೀಕರಣ ವಿರೋಧಿಸಿ ಇಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಛೇರಿಯ ಬಳಿ ಮೀಟರ್ ಸುಟ್ಟು ಪ್ರತಿಭಟನೆ ಮಾಡಲಾಯಿತು.ವಿದ್ಯುತ್ ಮೀಟರ್ ಗಳನ್ನ ಜಿಲ್ಲಾಧಿಕಾರಿ ಕಛೇರಿ ಎದುರು ಬಿಸಾಡಿ, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ರೈತ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.