ಶಿರಾ ಹೊರಹೊಲಯದಲ್ಲಿ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ | ವಿಶ್ವ ಕನ್ನಡಿ

ತುಮಕೂರು: ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶಿರಾ ನಗರದ ಹೊರವಲಯದ ಬೈಪಾಸ್ ರಸ್ತೆ ಸೇರುವ ಪ್ರದೇಶದಲ್ಲಿ ನಡೆದಿದೆ.  ಸುಮಾರು 28 ವರ್ಷ ವಯಸ್ಸಿನ ಸಾದಿಕ್ ಎಂಬಾತ ಕೊಲೆಯಾದ ದುರ್ದೈವಿ. ಕಳೆದ ರಾತ್ರಿ ತನ್ನ ಮೂರು ಜನ ಗೆಳೆಯರೊಂದಿಗೆ ಮಾದಕ ದ್ರವ್ಯ ಸೇವನೆಗೆ ತೆರಳಿದ್ದು. ಈ ವೇಳೆ ಗಲಾಟೆಯಾಗಿ ಸ್ನೇಹಿತರೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆವೆಂಬ ಶಂಕೆ ವ್ಯಕ್ತವಾಗಿದೆ. ಕ್ಷುಲ್ಲಕ ಕಾರಣಕ್ಕೆ ಘಟನೆ ನಡೆದಿದ್ದು,  ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರ್‌ವಾಡ್ , ಎಎಸ್‌ಪಿ ಉದೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಸದ್ಯ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶಿರಾ ಪೊಲೀಸರು ಬಲೆ ಬೀಸಿದ್ದಾರೆ.