ಶಾಸಕ ಬಿ.ಸಿ.ನಾಗೇಶ್ ಕುಟುಂಬದಿಂದ 8 ಲಕ್ಷ ವೆಚ್ಚದ ಆಕ್ಸಿಜನ್ ಕನ್ಸನ್ ಟ್ರೇಟರ್ ಕೊಡುಗೆ | ವಿಶ್ವ ಕನ್ನಡಿ

ತುಮಕೂರು: ತಿಪಟೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ಶಾಸಕರಾದ ಬಿ.ಸಿ.ನಾಗೇಶ್ ತಮ್ಮ ಅಜ್ಜ , ಅಜ್ಜಿ ಯಾದ ಬೆಳ್ಳೂರು ಕಮಲಮ್ಮ ಮತ್ತು ಸುಬ್ಬಣ್ಣ ಇವರ ಸ್ಮರಣಾರ್ಥ ಸುಮಾರು 8.00 ಲಕ್ಷ ವೆಚ್ಚದ 10 ಆಕ್ಸಿಜನ್ ಕನ್ಸನ್ ಟ್ರೇಟರ್ ಗಳನ್ನು ಕೊಡುಗೆಯಾಗಿ ನೀಡಿದರು.

ಇಲ್ಲಿ ಕ್ಲಿಕ್ ಮಾಡಿ ಪೂರ್ತಿ ವಿಡಿಯೋ ನೋಡಿ ಮತ್ತು ರೈಟ್‌ ಸೈಡ್ ಕಾಣುವ ಬೆಲ್ ಬಟನ್ ಕ್ಲಿಕ್ ಮಾಡಿ Subscribe ಆಗಿ


ನಂತರ ಮಾತನಾಡಿದ ಶಾಸಕರು ಕೋವಿಡ್-19 ರ ಮಾಹಮಾರಿ ಎರಡನೇ ಅಲೆಯಿಂದ ಜನರು ತತ್ತರಿಸಿದ್ದಾರೆ ರೂಪಾಂತರಿ ವೈರಸ್ ನಿಂದ ಆಕ್ಸಿಜನ್ ಹೇರಿಳಿತದಿಂದ ಸಾವು ನೋವು ಹೆಚ್ಚು ಸಂಭವಿಸುತ್ತಿದ್ದೆ ಈ ದೃಷ್ಟಿಯಿಂದ ಆಕ್ಸಿಜನ್ ಮಟ್ಟದ ಕುಸಿತಕಂಡ ರೋಗಿಗಳ ಉಪಯೋಗಕ್ಕಾಗಿ ಆಕ್ಸಿಜನ್ ಕಾನ್ಸನ್ ಟ್ರೇಟರ್ಸ್ ಗಳನ್ನು ನಮ್ಮ ಕುಟುಂಬವತಿಯಿಂದ ನೀಡಲಾಗಿದ್ದು ಇದರ ಸದ್ಬಳಕೆಗೆ ವೈದ್ಯರು ನಿಗಾವಹಿಸುವಂತೆ ಸೂಚಿಸಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಆರ್.ಜಿ.ಚಂದ್ರಶೇಖರ್, ವೈದ್ಯಾಧಿಕಾರಿ ಪ್ರಹ್ಲಾದ್ , ಡಿವೈಎಸ್ ಪಿ ಚಂದನ್ ಕುಮಾರ್, ತಾ ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ , ತಾಲ್ಲೂಕು ವೈದ್ಯಾಧಿಕಾರಿ ರವಿಕುಮಾರ್ ಹಾಗೂ ಕುಟುಂಬ ಸದಸ್ಯರಾದ ಶ್ರೀಕಂಠ ರವರು ಉಪಸ್ಥಿತರಿದ್ದರು.