ಸಚಿವ ಈಶ್ವರಪ್ಪ ಯಾಕೆ ಹೀಗೆ ಮಾಡತ್ತಾರೊ ಗೊತ್ತಿಲ್ಲ | ದೇವೇಗೌಡ್ರು ಬೊಮ್ಮಾಯಿರವರಿಗೆ ಮಾರ್ಗದರ್ಶನ ಮಾಡ್ತಾರೆ | ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆ | ವಿಶ್ವ ಕನ್ನಡಿ

ಈ ಸಂಬಂಧ ಡಾ.ಜಿ.ಪರಮೇಶ್ವರ್ ಹೇಳಿಕೆ ವಿಡಿಯೋ ಇದೆ ನೋಡಿ…


ತುಮಕೂರು: ಸಿಎಂ ಬೊಮ್ಮಾಯಿ ದೇವೇಗೌಡರ ಮನೆಗೆ ಭೇಟಿ ಕೊಟ್ಟಿರೋದು ಸಹಜ, ಅದಕ್ಕೆ ಬೇರೆ ಅರ್ಥ ಕಲ್ಪಿಸಿದರೆ ನಾವು ಸಣ್ಣವರಾಗುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ಮಾಧ್ಯಮದವರಿಗೆ ತಿಳಿಸಿದರು. ದೇವೇಗಾವಡರು ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಗೆ ಮಾರ್ಗದರ್ಶನ ಮಾಡುತ್ತಾರೆ,

ಬಸವರಾಜ ಬೊಮ್ಮಾಯಿ ಅವರು ಈ ರಾಜ್ಯದ ಮುಖ್ಯಮಂತ್ರಿಗಳು,
ನಾವುಗಳು ಉನ್ನತ ಹುದ್ದೆಗೆ ಹೋದಾಗ ಆ ಕ್ಷೇತ್ರದ ಹಿರಿಯರನ್ನ ಭೇಟಿ ಮಾಡೋದು ಒಂದು ಸಂಪ್ರದಾಯವಾಗಿದೆ.
ನಾನು ಕೂಡ ಡಿಸಿಎಂ ಆದಾಗ ಮಾಜಿ ಪ್ರಧಾನಿ ದೇವೆಗೌಡರನ್ನ ಭೇಟಿ ಮಾಡಿದ್ದೆ,

ಸಚಿವ ಈಶ್ವರಪ್ಪ ಅವಾಚ್ಯ ಶಬ್ದ ಬಳಸಿದ ವಿವಾರಕ್ಕೆ,
ಸಚಿವ ಈಶ್ವರಪ್ಪ ಯಾಕೆ ಹೀಗೆ ಮಾಡುತ್ತಾರೋ ಗೊತ್ತಿಲ್ಲ
ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಈ ರೀತಿ ಮಾತನಾಡಬಾರದು, ಅವರ ನಡವಳಿಕೆ ಸರಿಪಡಿಸಿಕೊಳ್ಳಬೇಕು ಇಂಥ ಭಾಷೆ ಉಪಯೋಗ ಸರಿಯಿಲ್ಲ
ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ತುಮಕೂರಿನಲ್ಲಿ ಉತ್ತರಿಸಿದರು.