ಶಿರಾ: ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಸಚಿವರು ಮತ್ತು ಶಾಸಕರು | ವಿಶ್ವ ಕನ್ನಡಿ

ಶಿರಾ: ಅಮರಾಪುರ ರಸ್ತೆಯ ಹುಚ್ಚಗೀರನಹಳ್ಳಿ ಗೇಟ್ ಬಳಿ ರಸ್ತೆ ಅಪಘಾತವಾಗಿದ್ದು, ಇದೇ ಮಾರ್ಗವಾಗಿ ಚಿಕ್ಕಬಾಣಗೆರೆ ಗ್ರಾಮದಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಚಿವ ಮಾಧುಸ್ವಾಮಿ ಅವರು ಶಾಸಕ ರಾಜೇಶ್ ಗೌಡ ಅವರು ಹಾಗೂ ವಿಧಾನಪರಿಷತ್ ಶಾಸಕ ಚಿದಾನಂದ ಎಂ. ಗೌಡ ಅವರು ಕೂಡಲೇ ತಮ್ಮ ವಾಹನ ನಿಲ್ಲಿಸಿ, ಗಾಯಾಳುಗಳನ್ನು ಉಪಚರಿಸಿದರು. ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ತಮ್ಮ ಬೆಂಗಾವಲು ವಾಹನದಲ್ಲೇ ಕಳಿಸಿಕೊಟ್ಟು ತಕ್ಷಣ ಚಿಕಿತ್ಸೆ ದೊರಕುವಂತೆ ಮಾಡಿ ಮಾನವೀಯತೆ ಮೆರೆದರು. ಜನಪ್ರತಿನಿಧಿಗಳ ಈ ಕಾರ್ಯವನ್ನು ಕಂಡ ಪ್ರತ್ಯಕ್ಷದರ್ಶಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಘಟನೆ ಶಿರಾ ಗ್ರಾಮಾಂತರ ಸರಹದ್ದಿನಲ್ಲಿ ನಡೆದಿದೆ.