ಶಾಲೆಗಳನ್ನ ಹಠಮಾಡಿ ಪ್ರಾರಂಭ ಮಾಡೊದಕ್ಕೆ ಬಿಜೆಪಿ ಬುದ್ದಿವಂತರ ಪಾರ್ಟಿ | ವೈ.ಎ.ನಾರಾಯಣಸ್ವಾಮಿ | ವಿಶ್ವ ಕನ್ನಡಿ

ತುಮಕೂರು: ಶಾಲೆಗಳ ಪ್ರಾರಂಭ ಮಾಡಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ವೈಎ ನಾರಾಯಣಸ್ವಾಮಿ, ಮೌಖಿಕ ಅದೇಶ ಕದ್ದು ಮುಚ್ಚಿ ಮಾಡುವ ಆದೇಶ ಅಲ್ಲ, ಹಿಂದೆ ಒಂದು ಮುಂದೆ ಒಂದು ಹೇಳುವ ಜಾಯಮಾನ ನಮ್ಮ ಸರ್ಕಾರದಲ್ಲ ಅದೆನೇ ಇದ್ದರು ನೇರವಾಗಿ ತಿಳಿಸುತ್ತವೆ, ಶಾಲೆಗಳನ್ನ ಪ್ರರಾಂಭ ಮಾಡುಲು ಆಗುವ ಸಮಸ್ಯೆಗಳನ್ನ ಚರ್ಚೆ ಮಾಡಲಾಗುತ್ತಿದೆ, ಸಿಎಂ ಯಡಿಯೂರಪ್ಪನವರು, ಶಿಕ್ಷಣ ಸಚಿವರು, ಶಿಕ್ಷಣ ಕ್ಷೇತ್ರ ಎಂಎಲ್ಸಿಗಳು, ಒಟ್ಟಿಗೆ ಎಲ್ಲಾರೂ ಶಿಕ್ಷಣ ತಜ್ಞರು ಮತ್ತು ಪೋಷಕರ ಜೊತೆ ಸಮಾಲೋಚನೆ ಮಾಡಿ ಇದಕ್ಕೆ ಸೂಕ್ತ ನಿರ್ಧಾರವನ್ನ ತೆಗೆದುಕೊಳ್ಳುತ್ತವೆ. ಬಹಳ ಬೇಗ ಶಾಲೆಗಳನ್ನ ಪ್ರಾರಂಭ ಮಾಡಬೇಕು ಎಂಬ ಆಸೆಕೂಡ ಇದೆ ಆದರೆ ಪ್ರಾರಂಭ ಮಾಡಿದರೆ ಮುಂದೆ ಏನು ಅಗುತ್ತೆ ಎಂಬ ಆತಂಕ ಕೂಡ ಇದೆ. ಶಾಲೆಗಳನ್ನ ಹಠಮಾಡಿ ಪ್ರಾರಂಭ ಮಾಡೊದಕ್ಕೆ ನಾವು ಬುದ್ದಿ ಇಲ್ಲದ ಜನಗಳು ಅಲ್ಲ ಬಿಜೆಪಿ ಬುದ್ದಿವಂತರ ಪಾರ್ಟಿ ಎಂದು ವೈಎ ನಾರಾಯಣಸ್ವಾಮಿ ತಿಳಿಸಿದರು. ಈ ಸಂದರ್ಭಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ನೂತನ ಶಾಸಕ ಚಿದಾನಂದಗೌಡ, ಶಾಸಕ ವೈಎ ನಾರಾಯಣಸ್ವಾಮಿ ಮತ್ತು ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಮತ್ತಿತ್ತರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.