ಕೊರಟಗೆರೆ: ಅಕ್ಕಿರಾಂಪುರ ಕುರಿ-ಮೇಕೆ ಸಂತೆಗೆ ಬಂದಿದ್ದ ಲಾರಿಯೊಂದು ಅವೈಜ್ಞಾನಿಕ ರಸ್ತೆಯ ತಿರುವುನಲ್ಲಿ ಪಲ್ಟಿ ಹೊಡೆದಿರುವ ಪರಿಣಾಮ 10 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟರೇ 25ಕ್ಕೂ ಹೆಚ್ಚು ಕುರಿಗಳ ಕೈಕಾಲು ಮುರಿದು ಹತ್ತಾರು ಜನ ರೈತರು ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಲು ಚಿಲ್ಲಾಪಿಲ್ಲಿ ಆಗಿ ಕುರಿಗಳನ್ನು ಬಿಟ್ಟು ಓಡಿರುವ ಘಟನೆ ಶನಿವಾರ ನಡೆದಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಕೇಂದ್ರಸ್ಥಾನದ ಕುರಿ ಮೇಕೆ ಸಂತೆಗೆ ಮೈಸೂರಿನಿಂದ ಕುರಿಗಳ ಖರೀದಿಗೆ ಬಂದಿದ್ದ ಲಾರಿಯೊಂದು ಕೆಸರು ಗದ್ದೆಯ ಮಣ್ಣಿನ ರಸ್ತೆಯಲ್ಲಿ ಜಾರಿ ನೋಡು ನೋಡುತ್ತಿದ್ದಂತೆ ಪಲ್ಟಿ ಕೊಡೆದಿರುವ ಪರಿಣಾಮ ರೈತಾಪಿ ವರ್ಗ ಭಯದಿಂದ ಚಿಲ್ಲಾಪಿಲ್ಲಿಯಾಗಿ ತಾವು ತಂದಿದ್ದ ಕುರಿಗಳನ್ನು ಬಿಟ್ಟು ಭಯದಿಂದ ಓಡಿ ಹೋಗಿರುವ ಘಟನೆ ನಡೆದಿದೆ.
ಮೈಸೂರು ಮೂಲದ ಲಾರಿ ಚಾಲಕ ಬಾಬಣ್ಣ ಮಾತನಾಡಿ ಅಕ್ಕಿರಾಂಪುರ ಕುರಿ ಮೇಕೆ ಸಂತೆ ಕೆಸರುಗದ್ದೆಯಾಗಿದೆ. ಮೂಲ ಸೌಲಭ್ಯದ ಜೊತೆ ರಸ್ತೆಯು ಸರಿಯಿಲ್ಲ. ಸಂತೆಯಿಂದ ರಸ್ತೆಗೆ ದಾಟುವ ವೇಳೆ ಲಾರಿ ಪಲ್ಟಿ ಹೊಡೆದಿದೆ. ಲಾರಿಯಲ್ಲಿದ್ದ 10ಕುರಿ ಮೃತಪಟ್ಟರೇ 25ಕ್ಕೂ ಹೆಚ್ಚು ಕುರಿಗಳಿಗೆ ಗಾಯಗಳಾಗಿವೆ. ನಮ್ಮ ಬಳಿ ಸುಂಕ ವಸೂಲಿ ಮಾಡ್ತಾರೇ ಆದರೇ ಸಮರ್ಪಕ ರಸ್ತೆ ಮಾಡಿಸಿಲ್ಲ ಎಂದು ಆರೋಪಿಸಿದರು. ಅಕ್ಕಿರಾಂಪುರ ಸ್ಥಳೀಯ ಸೈಯದ್ ಹುಸೇನ್‌ಪಾಷ ಮಾತನಾಡಿ ಕೇಬಲ್‌ಲೈನ್ ಅವೈಜ್ಞಾನಿಕ ದುರಸ್ಥಿ ಕಾಮಗಾರಿಯಿಂದ ಲಾರಿ ಚಾಲಕನ ನಿಯಂತ್ರಣತಪ್ಪಿ ಪಲ್ಟಿ ಹೊಡೆದಿದೆ. ಅಕ್ಕಿರಾಂಪುರ ಕುರಿ-ಮೇಕೆ ಸಂತೆ ಕೆಸರು ಗದ್ದೆಯಾಗಿ ಕುಡಿಯುವ ನೀರು, ಶೌಚಾಲಯ, ರಸ್ತೆ ಮತ್ತು ಬೆಳಕು ಮರೀಚಿಕೆ ಆಗಿದೆ. ಹಣ ವಸೂಲಿಗೆ ಮಾತ್ರ ಬರುವ ಅಧಿಕಾರಿ ವರ್ಗ ಅಭಿವೃದ್ದಿ ಎಂದರೇ ದೂರಕ್ಕೆ ಹೋಗ್ತಾರೇ ಎಂದು ಹೇಳಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಕ್ಕಿರಾಂಪುರ ಸಂತೆ ಕಾವಲುಗಾರ ಎಲ್.ಎನ್.ರೆಡ್ಡಿ ಮಾತನಾಡಿ ನಾವು ಕುರಿ-ಮೇಕೆ ಒಂದಕ್ಕೆ 5ರೂ ವಸೂಲಿ ಮಾಡ್ತೀವಿ. ವಾಹನ ಚಾಲಕರ ಬಳಿ ಮಾತ್ರ ಹಣ ಪಡೆಯುತ್ತೇವೆ. ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಹೇಳಿದಂತೆ ವಸೂಲಿ ಮಾಡುತ್ತೇವೆ. ನಾವು ವಸೂಲಿ ಮಾಡಿದ ಹಣವನ್ನು ಕಾರ್ಯದರ್ಶಿಗೆ ಕೋಡ್ತೇವೆ. ಮಿಕ್ಕಿದೇಲ್ಲ ನೀವು ಅವರಿಗೆ ಕೇಳ್ಬೇಕು. ನನಗೆ ಏನು ಗೋತ್ತೀಲ್ಲ ಅವರು ಹೇಳಿದಂತೆ ನಾವು ಕೇಳುತ್ತೇವೆ ಎಂದು ಹೇಳಿದರು.
ಅಕ್ಕಿರಾಂಪುರ ಕುರಿಮೇಕೆ ಸಂತೆಯಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ಚರಂಡಿ ಮತ್ತು ಬೆಳಕು ಮರೀಚಿಕೆ ಆಗಿದೆ. ಆದರೇ ಸುಂಕ ಮಾತ್ರ ಒಬ್ಬರ ಹತ್ತಿರನೋ ಬೀಡದಂತೆ ವಸೂಲಿ ಮಾಡ್ತಾರೇ. ಪ್ರಶ್ನೆ ಮಾಡಿದರೇ ರೈತಾಪಿ ವರ್ಗ ಮತ್ತು ವಾಹನ ಚಾಲಕರಿಗೆ ಗೇಟಿನಿಂದ ಹೊರಗಡೆ ನಿಲ್ಲಿಸುವ ಸನ್ನಿವೇಶವು ಜರುಗಿದೆ. ವಾಹನ ಸೇರಿದಂತೆ ರೈತರ ಬಳಿಯು ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಾರೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದರು.