ಸಾಹಿತ್ಯ ಪ್ರಕಾರದಲ್ಲಿ ನಾಟಕವೇ ಹೆಚ್ಚು ರಮ್ಯವಾದದ್ದು | Vishwa kannadi

“ಕಾವ್ಯೇಷು ನಾಟಕಂ ರಮ್ಯಂ” ಎಂಬ ಮಾತಿನಂತೆ ಸಾಹಿತ್ಯ ಪ್ರಕಾರದಲ್ಲಿ ನಾಟಕವೇ ಹೆಚ್ಚು ರಮ್ಯವಾದದ್ದು, ಆದ್ದರಿಂದ ವೈಭವದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಟಕವನ್ನ ಪ್ರಯೋಗಿಸಿ ಅದನ್ನು ಹೆಚ್ಚು ಅರ್ಥಪೂರ್ಣಗೊಳಿಸುವಲ್ಲಿ ನಮದೊಂದು ಪುಟ್ಟ ಪ್ರಯತ್ನ ಎಂದು ನಾಟಕದ ನಿರ್ದೇಶಕರಾದ ಮೆಳೇಹಳ್ಳಿ ದೇವರಾಜು ಅಭಿಪ್ರಾಯಪಟ್ಟರು. ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರವೂ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಆಯೋಜಿಸಿದ“ವೈಶಂಪಾಯನ ಸರೋವರದಲ್ಲಿ” ನಾಟಕದ ಪ್ರಾಸ್ತಾವಿಕ ನುಡಿಗಳಲ್ಲಿ ಅಭಿಪ್ರಾಯಪಟ್ಟರು. ನಂತರ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ನಾಟಕ ಆರಂಭಿಸಿದರು. ಕಾಣದ ವೈರಿಯನ್ನ ಮೊದಲು ಗೆಲ್ಲಬೇಕು ನಂತರ ಕಾಣುವ ಸಂಕಷ್ಟಗಳ ವಿರುದ್ಧ ಹೋರಾಡೋಣ ಆದ್ದರಿಂದ ಕೋವಿಡ್ ನಿಯಮಗಳನ್ನ ಅನುಸರಿಸಿ ನೀವು ಉಳಿಯಿರಿ ನಿಮ್ಮವರನ್ನು ಉಳಿಸಿಕೊಳ್ಳಿ ಎಂಬ ಸಂದೇಶವನ್ನ ನಾಟಕ ವ್ಯಕ್ತಪಡಿಸಿತು. ರಂಗದಲ್ಲಿ ಮಹಾಂತೇಶ್ ಗೋಲಬಾವಿ, ಸಂತೋಷ್ ವಿಜಯಪುರ, ಹಿರಣ್ಯ ವಿಜಯಪುರ, ಭರತ್.ಎನ್, ಸ್ನೇಹ.ಎನ್, ತನುಜ.ಎನ್, ಪಲ್ಲವಿ.ಕೆ.ಎಸ್, ಚಿನ್ಮಯ.ಕೆ.ಪಿ, ಲಯ.ಎಂ.ಡಿ, ಸೃಷ್ಠಿ.ಎಂ.ಡಿ, ಧೃವಪ್ರಕಾಶ್ ಮನೋಜ್ಞವಾಗಿ ಅಭಿನಯಿಸಿದರು. ನಾಟಕಕ್ಕೆ ರೇಖಾದೇವರಾಜ್ ವಸ್ತ್ರವಿನ್ಯಾಸ, ಪ್ರಕಾಶ್ ಬೆಳಕು ವಿನ್ಯಾಸ, ಅನಿತಾಪ್ರಕಾಶ್ ಪ್ರಸಾದನ, ಉಮೇಶ್ ರಂಗಸಜ್ಜಿಕೆ ಮೆರುಗು ನೀಡಿದವು.