ಕ್ಯಾತ್ಸಂದ್ರ ಪೊಲೀಸರಿಂದ ಕೋವಿಡ್ ಜಾಗೃತಿ

ತುಮಕೂರು: ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೋಲೀಸ್ ಠಾಣೆಯ ವತಿಯಿಂದ ಊರ್ಡಿಗೆರೆ ಹೋಬಳಿಯ ಮೈದಾಳ,ಅರೆಗುಜ್ಜನಹಳ್ಳಿ,ಕೆಂಪಹಳ್ಳಿ ಇತರೆ ಪ್ರಮುಖ ಗ್ರಾಮಗಳಲ್ಲಿ ಕೋವಿಡ್-19 ಜಾಗೃತಿ ಮತ್ತು ಅರಿವು ಕಾರ್ಯಕ್ರಮ ದಲ್ಲಿ ಪ್ರೊಬೆಷನರಿ ಐ.ಪಿ.ಎಸ್.ಅಧಿಕಾರಿ ಕನ್ನಿಕಾಸಿಕ್ರಿವಲ್, ಕ್ಯಾತ್ಸಂದ್ರ ಸಬ್ ಇನ್ಸ್‍ಪೆಕ್ಟರ್ ರಾಮಪ್ರಸಾದ್ ರವರು ಸಾರ್ವಜನಿಕರೊಂದಿಗೆ ಮಾತನಾಡಿ ಮಾಸ್ಕ್ ಧರಿಸಬೇಕು,ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು, ಪದೇ ಪದೇ ಸೋಪು ಬಳಸಿ ಕೈ ತೊಳೆಯಬೇಕು, ಸ್ಯಾನಿಟೈಸರ್ ಉಪ ಯೋಗಿ ಸುತ್ತಿರಬೇಕು, ಕೆಮ್ಮುವಾಗ ಮತ್ತು ಸೀನುವಾಗ ಮೂಗು ಮತ್ತು ಬಾಯನ್ನು ಮುಚ್ಚಿಕೊಳ್ಳಬೇಕು,ಮನೆಯಿಂದ ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿಯೇ ಹೊರಹೋಗಬೇಕು,ಜ್ವರ ಕೆಮ್ಮು ಕಂಡು ಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು, ದೊಡ್ಡ ಗುಂಪುಗಳಲ್ಲಿ ಸೇರಬೇಡಿ,ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ, ಜ್ವರ ಅಥವಾ ಕೆಮ್ಮು ಇದ್ದಲ್ಲಿ ಯಾರನ್ನೂ ಭೇಟಿಯಾಗಬೇಡಿ ಮನೆಯಲ್ಲಿಯೇ ಇರಿ ಎಂದು ಹೇಳಿ ಕರಪತ್ರಗಳನ್ನು ನೀಡಿ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿದರು. ಭಾರತದಲ್ಲಿ ಕೋವಿಡ್-19 ದಿನೇ ದಿನೇ ಜಾಸ್ತಿಯಾಗುತ್ತಿದೆ, ಇದನ್ನು ಹೊಡೆದೋಡಿಸಲು ನಾವೆಲ್ಲರೂ ಪಣತೊಡಬೇಕು,ಇದಕ್ಕಾಗಿ ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು ಎಂದು ರಾಮಪ್ರಸಾದ್ ರವರು ಸಾರ್ವಜನಿಕರಿಗೆ ಕರೆ ನೀಡಿದರು. ಮುಖ್ಯಪೇದೆ ನಾಗರಾಜು, ನಾಗ ರೀಕರಾದ ಅರುಣ್‍ಕುಮಾರ್, ಪತ್ರಕರ್ತರಾದ ಕೆ.ಬಿ.ಮಂಜುನಾಥ್,ಎ.ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.