ಕುಣಿಗಲ್: ತಾಲೂಕಿನ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಇಂದು ಚುಣಾವಣೆ ನಡಿಯಿತು ಶಾಸಕ ರಂಗನಾಥ್ ನೆತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿ ನಾಗೇಂದ್ರ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮಂಜುಳ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿಆಯ್ಕೆಯಾಗಿದ್ದಾರೆ
ಕಾಂಗ್ರೆಸ್ ನಲ್ಲಿ ಮೂರುಜನ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದು ನಂತರ ಇಂದು ಬೆಳಗ್ಗೆ ಸಂಸದರ ನೆತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಧಿಕೃತವಾಗಿ ಮೋದಲ ಭಾರಿಗೆ ಪುರಸಭೆಗೆ ಸದಸ್ಯನಾಗಿ ಆಯ್ಕೆಯಾಗಿದ್ದ ನಾಗೇಂದ್ರ ರವರಿಗೆ ಅಧ್ಯಕ್ಷ ಪಟ್ಟ ಕೊಟ್ಟಿದ್ದರಿಂದ ಪಕ್ಷದಲ್ಲಿ ಸಕ್ರಿಯವಾಗಿ ಮೂರು ನಾಲ್ಕು ಭಾರಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಆಸೆಗೆ ತಣ್ಣಿರು ಎರಚಿದಂತಾಗಿರುವುದಂತು ನಿಜ ಆದರೆ ಸಂಸದರ ಮಾತಿಗೆ ಎದುರಾಡದ ಮುಖಂಡರು ಅವರ ಆಣತಿಯಂತೆ ನಾಗೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಯಾರು ಕೂಡ ಚಕರವೆತ್ತಿಲ್ಲ