ಜಲಾಶಯದ ನಾಲೆಯ ನೀರಿನ ಸೆಳೆತಕ್ಕೆ ಯುವಕ ಬಲಿ | Vishwa kannadi

ಕುಣಿಗಲ್ :ಮಾರ್ಕೋನಹಳ್ಳಿಹಿಂಭಾಗದಲ್ಲಿ ಕಳೆದ ಸಾಲಿನಲ್ಲಿ ನೂತನವಾಗಿ ದುರಸ್ತಿ ಮಾಡಿದ್ದ ನಾಲೆಯಲ್ಲಿ ನೀರಿನ ಸೆಳೆತಕ್ಕೆ ಯುವಕ ಸಾವನ್ನಪ್ಪಿರುವ ಘಟನೆ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ, ತಾಲ್ಲೂಕಿನ ಅಮೃತೂರು ಹೋಬಳಿ ಮಾರ್ಕೋನಳ್ಳಿ ಜಲಾಶಯ ನೋಡಲೆಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಸುಮಾರು  21ಮಂದಿ 1ದಿನ ಪ್ರವಾಸಕ್ಕೆಂದು

ಬಂದು ಆದಿಚುಂಚನಗಿರಿ ಯಡ್ಯೂರ್ ಪ್ರವಾಸ ಮುಗಿಸಿ ಮಾರ್ಕೋನಹಳ್ಳಿ ಜಲಾಶಯ ನೋಡಲೆಂದು ಬಂದಿದ್ದರು. ಈ ಸಂದರ್ಭದಲ್ಲಿ ತಮ್ಮ ದೊಡ್ಡಮ್ಮನ ಜತೆಗೂಡಿ ಸಂಜಯ್ (14 ) ನೀರುಹೋಗುತ್ತಿದ್ದ  ನಾಲೆಯಲ್ಲಿ ಆಟವಾಡಲು ಇಳಿದಿದ್ದಾನೆ ಆದರೆ ಈ ಹುಡುಗನಿಗೆ ಈಜು ಬರುತ್ತಿರಲಿಲ್ಲ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ  ಉಸಿರುಗಟ್ಟಿ  ಸಾವನ್ನಪ್ಪಿದ್ದಾನೆ ಸ್ಥಳೀಯರು ಹುಡುಗನ ಶವವನ್ನು ಹುಡುಕಿ ಮೇಲಕ್ಕೆತ್ತಿದ್ದಾರೆ  ಹುಡುಗನನ್ನು ಕಳೆದುಕೊಂಡವರ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಅಮೃತೂರು ಪೊಲೀಸ್ ಠಾಣೆಯ ಪಿಎಸ್ ಐ ಮಂಜು ರವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ಮಾರ್ಕೋನಹಳ್ಳಿ ಜಲಾಶಯ ಸೋಮವಾರ ಹೇಮಾವತಿ ನೀರಿನಿಂದ   ಭರ್ತಿಯಾಗಿ  ಕೋಡಿ ಬಿದ್ದಿತ್ತು ಹಾಗೂ ನಾಲೆಯನ್ನು ನೂತನವಾಗಿ ದುರಸ್ತಿ ಪಡಿಸಲಾಗಿತ್ತು ಇದರಿಂದ  ಯುವಕನನ್ನು ಜಲಾಶಯ ಬಲಿ ಪಡೆದಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿರುವುದು ಕಂಡುಬಂದಿತು.