ಕುಂಚಿಟಿಗ ನಿಗಮ ಮಂಡಳಿಯನ್ನು ಸ್ಥಾಪಿಸಿ, ಸಿಎಂ ಗೆ ಮನವಿ

ರಾಜ್ಯದಲ್ಲಿ ಕುಂಚಿಟಗ ಸಮುದಾಯ ಸುಮಾರು 17 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಲ್ಲಿದ್ದು, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಎಂದು ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘ ಮತ್ತು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡ್ಯೂರಪ್ಪನರಿಗೆ ಇಂದು ಮುಖ್ಯಮಂತ್ರಿ ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಿದರು.

ಕುಂಚಿಟಿಗರ ಅಭಿವೃದ್ದಿಗಾಗಿ ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವುದು ಮತ್ತು ರಾಜ್ಯ ಸರ್ಕಾರ ಕುಂಚಿಟಿಗ ನಿಗಮ ಮಂಡಳಿಯನ್ನು ಸ್ಥಾಪಿಸಿ ಕುಂಚಿಟಿಗ ಸಮುದಾಯಕ್ಕೆ ಶಕ್ತಿತುಂಬುವಂತಹ ಅವಶ್ಯಕತೆಯಿದೆ. ಸಮುದಾಯದಲ್ಲಿ 48 ಬುಡಕಟ್ಟುಗಳಿದ್ದು ಎಲ್ಲರೂ ಕೃಷಿಯನ್ನೇ ಅವಲಂಭಿಸಿದ್ದಾರೆ. ರಾಜ್ಯದಲ್ಲಿ ಯಾದವ, ಮಡಿವಾಳ, ವಾಲ್ಮೀಕಿ, ಕುರುಬ ಸಮುದಾಯಗಳಿಗೆ ನೀಡಿದಂತೆನಮ್ಮ ಸಮುದಾಯಕ್ಕೂ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು. ಇದರ ಜತೆಗೆ ಹಲವು ಬೇಡಿಕೆಗಳನ್ನು ಒಳಗೊಂಡಂತೆ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘದ ರಾಜ್ಯಾಧ್ಯಕ್ಷ ವಿನಯ್ ಪೂಜಾರಿ ಮುಖ್ಯಂತ್ರಿ ಯಡ್ಯೂರಪ್ಪನವರಿಗೆ ಕುಂಚಿಟಿಗ ಸಮುದಾಯ ಹೆದರಿಸುತ್ತಿರುವ ಸಮಸ್ಯೆ ಸೇರಿದಂತೆ ಸಮುದಾಯಕ್ಕೆ ಸಿಗಬೇಕಿರುವ ಸ್ಥಾನಮಾನಗಳ ಬಗ್ಗೆ, ಸಮುದಾಯ ಇತಿಹಾಸ ಸೇರಿದಂತೆ ಹಲವು ವಿಚಾರಗಳನ್ನು ಮುಖ್ಯಮಂತ್ರಿಗೆ ವಿವರಿಸಿದರು. ಮನವಿಯನ್ನು ಸಲ್ಲಿಸುವಾಗ ಶಿಕಾರಿಪುರದ ಮುಖಂಡ ಜಗಧೀಶ್, ರುದ್ರಪ್ಪ, ಮೈಸೂರಿನ ಪ್ರದೀಪ್ ಸೇರಿದಂತೆ ಹಲವು ಮುಖಂಡರು ಇದ್ದರು.