ಕೃಷಿ ಹೊಂಡ ನಿರ್ಮಾಣ: ಎನ್ಎಂಆರ್ ಬಗ್ಗೆ ಪ್ರಶ್ನಿಸಿದ ರೈತನ ಮೇಲೆ ದೌರ್ಜನ್ಯ

ಪಾವಗಡ : ಮಹಾತ್ಮಗಾಂಧಿ ರಾಷ್ಠ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೃಷಿ ಇಲಾಖೆಯಲ್ಲಿ ರೈತರಿಗೆ ಕೃಷಿ ಹೊಂಡ ನಿರ್ಮಾಣ ಮಾಡುತ್ತಿದ್ದು ಹಲವು ತಿಂಗಳು ಕಳೆದರು ಎನ್‍ಎಂಆರ್ ತೆಗೆಯದ ಬಗ್ಗೆ ಇಲಾಖೆಗೆ ತೆರಳಿ ಪ್ರಶ್ನಿಸಿದ ರೈತರ ಮೇಲೆ ಇಲಾಖಾಧಿಕಾರಿಗಳ ಸಮಕ್ಷಮದಲ್ಲೇ ಗುತ್ತಿಗೆ ಸಿಬ್ಬಂದಿ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಪಾವಗಡ ತಾಲೂಕಿನ ಸಾಸಲಕುಂಟೆ ಗ್ರಾಮದ ರೈತ ನಾಗೇಂದ್ರ ಪ್ರತಾಪ್ ಇತರರು ಪಟ್ಟಣದ ಕೃಷಿ ಇಲಾಖೆಯಲ್ಲಿ ರೈತರ ಜಮೀನಿನಲ್ಲಿ ನಿರ್ಮಾಣ ಮಾಡುವ 1ಲಕ್ಷ 15ಸಾವಿರದ ಕೃಷಿಹೊಂಡಗಳು ರೈತರಿಗೆ ಕೂಲಿ ಕೆಲಸದಲ್ಲಿ ನೀಡುತ್ತಿದ್ದು, ಅದೇ ವಿಷಯವಾಗಿ ನಮ್ಮ ಜಮೀನಿನಲ್ಲಿ ಕೈಗೊಂಡ ಕಾಮಗಾರಿಯ ಎನ್‍ಎಂಆರ್ ನಾಲ್ಕು ತಿಂಗಳಾದರು ತೆಗೆಯದ ವಿಚಾರವಾಗಿ ಗುತ್ತಿಗೆ ಕೇಲಸದಲ್ಲಿ ಕಂಪ್ಯೂಟರ್ ಆಪರೇಟರಾಗಿ ಕಾರ್ಯನಿರ್ವಹಿಸುವ ನವೀನ್ ಎಂಬುವವರನ್ನು ಕೇಳಿದಾಗ ರೈತರ ಮೇಲೆ ಸಹಾಯಕ ನಿರ್ದೇಶಕಿ ವಿಜಯಮೂರ್ತಿರವರ ಎದುರೇ ರೈತರ ಮೇಲೆ ದಬ್ಬಾಳಿಕೆ ನಡೆಸಿದ್ದು ಇತನ ದೌರ್ಜನ್ಯಕ್ಕೆ ಎಡಿಯವರು ಕೂಡ ಸಾಥ್ ನೀಡಿದ ಪರಿಣಾಮ ಕೆಲಕಾಲ ರೈತರು ಇದು ಇಲಾಖೆಯೊ ಅಥವಾ ರೌಡಿಗಳ ಆಡ್ಡವೂ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ನಾಗೇಂದ್ರ ಪ್ರತಾಪ್ ಮಾತನಾಡಿ ಕೃಷಿ ಇಲಖೆಯಲ್ಲಿ ನನ್ನ ಜೋತೆ ಅರ್ಜಿಸಲ್ಲಿದ ರೈತರ ಎನ್‍ಎಂಆರ್ ತೆಗೆದಿದ್ದು ಅವರು ಹಣ ನೀಡಿದ್ದಾರೆ, ನಾವು ಹಣ ನೀಡದ ಕಾರಣ ನಾಲ್ಕು ತಿಂಗಳು ಕಳೆದರು ನಮ್ಮ ಕೃಷಿ ಹೊಂಡ ಎನ್‍ಎಂಆರ್ ತೆಗೆದಿಲ್ಲ, ಎಡಿಯವರನ್ನು ಕೇಳಿದರೆ ಉಡಾಪೇ ಉತ್ತರ ನೀಡುತ್ತಾರೆ, ಇದು ಕೃಷಿ ಇಲಾಖೆಯೋ ಅಥವಾ ದಳ್ಳಾಳಿಗಳ ಕೇಂದ್ರವೂ ನಮಗೆ ತಿಳಿದಿಲ್ಲ ಇಂತಹ ಅಧಿಕಾರಿಯನ್ನು ತಕ್ಷಣವೇ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.

ನಾಗಲಮಡಿಕೆ ಹೋಬಳಿಯ ತಿಮ್ಮಮ್ಮನಹಳ್ಳಿ ಗ್ರಾಮದ ಅನಿಲ್‍ಕುಮಾರ್ ಮಾತನಾಡಿ ಒಂದು ವರ್ಷದ ಹಿಂದೆ ಸ್ಪಿಂಕ್ಲರ್ ಪೈಪ್‍ಗೆ ಅರ್ಜಿ ಸಲ್ಲಿಸಿದ್ದೆ, ಪೈಪುಗಳು ಬಂದಿವೆ ಕಳೆದಾ ಒಂದು ತಿಂಗಳಿನಿಂದ ಇಲಾಖೆಗೆ ಅಲೆದರು ಯಾರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ, ಹಾಗೂ ಇಂದು ಇದೇ ವಿಚಾರವಾಗಿ ಕೇಳಿದಾಗ ಪಟ್ಟಣದ ಕೃಷಿ ಇಲಾಖೆಯಿಂದ ನಾಗಲಮಡಿಕೆ ಹೋಬಳಿ ಕೇಂದ್ರಕ್ಕೆ ಮೂರು ಭಾರಿ ಅಲೆದಾಡಿದ್ದೆನೆ ಯಾರು ಸರಿಯಾದ ಮಾಹಿತಿ ನೀಡುತ್ತಿಲ್ಲ ಇಲ್ಲಿನ ಕೇಲಸಗಳ ಬಗ್ಗೆ ಯಾರನ್ನು ಕೇಳಬೇಕು ಎಂದು ಆವೇದನೆ ವ್ಯಕ್ತಪಡಿಸಿದರು.