ಸಿರಾ: ಕಾಡುಗೊಲ್ಲ ಸಮುದಾಯ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ತೀವ್ರ ಹಿಂದುಳಿದಿದ್ದು, ಪರಿಶಿಷ್ಟ ಪಂಗಡದಲ್ಲಿ ಸೇರಿಸಿ ಮೀಸಲಾತಿ ಕಲ್ಪಿಸುವುದರ ಜತೆಗೆ ಬಿಜೆಪಿ ಪಕ್ಷ ಸಿರಾ ಉಪಚುನಾವಣೆಯಲ್ಲಿ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಂತೆ ರಾಜ್ಯ ಕಾಡುಗೊಲ್ಲ ಹಿತ ರಕ್ಷಣಾ ಸಮಿತಿ ಹಾಗೂ ಕಾಡುಗೊಲ್ಲ ಒಕ್ಕೂಟಗಳ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಒತ್ತಾಯಿಸಿದರು. ತಾಲ್ಲೂಕಿನ ಕರೇಕಲ್ಲಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಕಾಡುಗೊಲ್ಲ ಸಮುದಾಯದವರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಾಡುಗೊಲ್ಲ ಆಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು ಸ್ವಾಗರ್ತಹ. ನಿಗಮ ಸ್ಥಾಪನೆಯೊಂದಿಗೆ 100 ಕೋಟಿ ರೂ. ಅನುದಾನ ಮಂಜೂರು ಮಾಡುವ ಮೂಲಕ ಕಾಡುಗೊಲ್ಲರ ಹಟ್ಟಿಗಳನ್ನು ಆಭಿವೃದ್ಧಿಪಡಿಸುತ್ತ ಹೆಚ್ಚು ನಿಗಾ ವಹಿಸಬೇಕು. ಸಿರಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆ ಯುತ್ತಿದ್ದು, 40 ಸಾವಿರ ಮತಗಳಿರುವ ಕಾಡುಗೊಲ್ಲರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಕಾಡುಗೊಲ್ಲ ಮುಖಂಡ ಹಾರೋಗೆರೆ ಮಾರಣ್ಣ ಮಾತ ನಾಡಿ, ರಾಜ್ಯದಲ್ಲಿ ಕಾಡುಗೊಲ್ಲ ಹಟ್ಟಿಗಳ ಆಭಿವೃದ್ಧಿ ಮರೀಚಿಕೆಯಾಗಿದೆ.
ಇಂದಿಗೂ ಸಹ ಗುಡಿಸಲಿನಲ್ಲಿ ಬದುಕು ವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕಾಡುಗೊಲ್ಲರಿಗೆವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಈ ಉದ್ದೇಶ ದಿಂದತಾಲ್ಲೂಕಿನಲ್ಲಿರುವ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕಾಡುಗೊಲ್ಲ ಮುಖಂಡರಾದ ಹಾರೋಗೆರೆಮಾರಣ್ಣ, ಪೂಜಾರ್ ಜಯರಾಮಯ್ಯ, ಈರಣ್ಣ, ಸೀತರಾಮ್, ದಳವಾಯಿ ಮಹಲಿಂಗಪ್ಪ, ಶಿವಣ್ಣ, ಜಯರಾಂ, ರಾಮಲಿಂಗಪ್ಪ, ಗೋವಿಂದರಾಜು, ದಾಸಣ್ಣ, ಕಾಟಪ್ಪ ಮತ್ತಿತರರು ಉಪಸ್ಥಿತರಿದ್ದರು.
