ಪತ್ರಕರ್ತ ಸಿ.ಎನ್.ಭಾಸ್ಕರಪ್ಪ ಬದುಕು-ಬರಹ ಹಾಗೂ ಸೇವಾಕಾರ್ಯ ಕೃತಿ ಲೋಕಾರ್ಪಣೆ | ವಿಶ್ವ ಕನ್ನಡಿ

ತುಮಕೂರು: ಮಾಜಿ ಸಂಸದ ಸಿ.ಎನ್.ಭಾಸ್ಕರಪ್ಪ ಅವರ 79ನೇ ಜನ್ಮದಿನದ ಅಂಗವಾಗಿ “ವನಸುಮ” (ಅವರ ಬದುಕು-ಬರಹ ಹಾಗೂ ಸೇವಾಕಾರ್ಯ) ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ನಗರದ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಬೆಳಿಗ್ಗೆ: 10-15ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀದೇವಿ ಸಮೂಹ ವಿದ್ಯಾಸಂಸ್ಥೆ ಸಂಸ್ಥಾಪಕರು, ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್ ವಹಿಸಿಕೊಳ್ಳಲಿದ್ದು, ಕೃತಿಯನ್ನು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಗೌರವಾಧ್ಯಕ್ಷರು ಹಾಗೂ ಮಾಜಿ ಕುಲಸಚಿವರಾದ ಡಾ.ಬಿ.ಕೆ.ರವಿ ಅವರು ಬಿಡುಗಡೆಗೊಳಿಸಲಿದ್ದಾರೆ. ವನಸುಮ ಕೃತಿಯ ಲೇಖಕರಾದ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಅವರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಸಿ.ಎನ್.ಭಾಸ್ಕರಪ್ಪ ಅವರ ತುಮಕೂರು ಟೈಮ್ಸ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ಪತ್ರಕರ್ತರಾದ ಟಿ.ಎಸ್.ಗಟ್ಟಿ, ಕೆ.ಪ್ರಸನ್ನ, ಆರ್.ಕಾಮರಾಜು, ಮಣ್ಣೆರಾಜು, ಕೆ.ಬಿ.ಚಂದ್ರಮೌಳಿ, ಎಂ.ಆರ್.ಗೋಪಾಲರಾವ್, ಎಲ್ ಚಿಕ್ಕೀರಪ್ಪ ಹಾಗೂ ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಬಿ.ಎಸ್.ಮಂಜುನಾಥ್, ಹೆಚ್.ಎನ್.ಮಲ್ಲಿಕಾರ್ಜುನ್, ನಳಿನಾ ಇಂದ್ರಕುಮಾರ್ ಅವರಿಗೆ ಸನ್ಮಾನವನ್ನು ಸಲ್ಲಿಸಲಾಗುವುದು.

ಸಮಾರಂಭದಲ್ಲಿ ಮಾಜಿ ಸಚಿವರಾದ ಸಿ.ಎಂ.ಇಬ್ರಾಹಿಂ, ಹೆಚ್.ಎಂ.ರೇವಣ್ಣ, ಆಚಾರ್ಯ ಡಾ.ನಾಗರಾಜು, ಶಾಸಕ ಬಂಡೆಪ್ಪ ಕಾಶೆಂಪುರ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರಾದ ಸುರೇಶ್‍ಬಾಬು, ಶಫೀ ಅಹ್ಮದ್, ಗಂಗಹನುಮಯ್ಯ, ಹೆಚ್.ನಿಂಗಪ್ಪ, ಬಿ.ಲಕ್ಕಪ್ಪ, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಲಿಂಗಪ್ಪಜ್ಜ, ಪ್ರಧಾನ ಕಾರ್ಯದರ್ಶಿ ಎಂ.ವಿ.ವೆಂಕಟೇಶ್‍ಮೂರ್ತಿ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ, ನಿರ್ದೇಶಕರಾದ ಕೆ.ಎಂ.ರಾಮಚಂದ್ರಪ್ಪ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಜಿಲ್ಲಾ ಕುರುಬರ ಸಂಘದ  ಸಂಸ್ಥಾಪಕ ಅಧ್ಯಕ್ಷ ಎಂ.ನಂಜರಾಜು, ಟೂಡಾ ಮಾಜಿ ಅಧ್ಯಕ್ಷ ಸಿ.ಶಿವಮೂರ್ತಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್, ಸಿ.ಪುಟ್ಟರಾಜು, ಜಿ.ಪಂ.ಸದಸ್ಯ ಎಂ.ಮೈಲಾರಪ್ಪ, ಕೆಯೂಡಬ್ಲ್ಯೂಜೆ ಜಿಲ್ಲಾ ಘಟಕದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮೈಲಾರಪ್ಪ, ನಾಗೇಂದ್ರಪ್ಪ ಸೇರಿದಂತೆ ಇತರರರು ಇರುವರು ಎಂದು ಡಾ.ಸಿಎನ್.ಎನ್.ರಾಜು, ಸಿ.ಎನ್.ಬಾಲವರ್ಧನ್, ಟಿ.ಇ.ರಘುರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.