ಗುಬ್ಬಿ: ತಾಲೂಕಿನಲ್ಲಿ ರಾಷ್ಟ್ರೀಯ 206ರ ಚತುಷ್ಪಥ ರಿಂಗ್ ರಸ್ತೆಯು ಹಾದು ಹೋಗಿರುವ ರಸ್ತೆ ನಿರ್ಮಾಣಕ್ಕೆ ತಾಲೂಕಿನ ನೂರಾರು ರೈತರು ತಮ್ಮ ಜಮೀನನ್ನು ನೀಡಿದ್ದಾರೆ. ಈ ಪೈಕಿ ಸಿಂಗೋನಹಳ್ಳಿ ಗ್ರಾಮದ ಸರ್ವೆ ನಂ 101ರಲ್ಲಿ ರೈತ ಮಹಿಳೆ ಗಂಗಮ್ಮ ಅವರಿಗೆ ಸೇರಿದ 1.1 ಎಕರೆ ಜಮೀನು ಕೊಡ ವಶಪಡಿಸಿಕೊಂಡಿದ್ದಾರೆ.
ಹೆದ್ದಾರಿಯ ಪ್ರಾಧಿಕಾರದ ಸರ್ವೇ ಕಾರ್ಯದಲ್ಲಿ ಅದ ಪ್ರಮಾದದಿಂದ 1.1ಎಕರೆ ಬದಲಾಗಿ ಕೇವಲ 29 ಗಂಟೆಗೆ ಮಾತ್ರ ಪರಿಹಾರ ನೀಡಿದ್ದು ಬಾಕಿ 12 ಗಂಟೆಗೆ ನೀಡಬೇಕಿದ್ದ ಪರಿಹಾರ ಹಣದ ವಿಚಾರವಾಗಿ ಕಳೆದ ನಾಲ್ಕು ವರ್ಷದಿಂದ ನಾಲ್ಕು ವರ್ಷದಿಂದ ಪರದಾಡಿಸಿದ್ದಾರೆ.
ಈ ವಿಚಾರವಾಗಿ ಇಂದು ಸ್ಥಳಕ್ಕೆ ಬೇಟಿ ನೀಡಿದ ತಹಶೀಲ್ದಾರ್ ಬಿ.ಆರತಿ, ಪ್ರಾಧಿಕಾರದ ಸರ್ವೇಯರ್ ಭೈರೇಶ್ ಹಾಗೂ ಆರಕ್ಷಕ ನಿರೀಕ್ಷಕ ನದಾಫ್, ಪಿ.ಎಸ್.ಐ ನಟರಾಜ್ ಬೇಟಿ ನೀಡಿ ಕಾಮಗಾರಿ ಪ್ರಾರಂಭಿಸಲು ಮುಂದಾದರು ಈ ಸಂಧರ್ಭದಲ್ಲಿ ರಸ್ತೆ ಕಾಮಗಾರಿ ನಡೆಸದಂತೆ ಸಂತ್ರಸ್ತೆ ರೈತ ಮಹಿಳೆ ಗಂಗಮ್ಮ ಪರವಾಗಿ ಸ್ಥಳೀಯರು ಅಡ್ಡಿ ಪಡಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಪ.ಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪ ಸ್ವಾಮಿ ಪ.ಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಮುಖಂಡರಾದ ಹೇರೂರು ನಾಗರಾಜು, ಶ್ರೀನಿವಾಸ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಆರ್.ಗುರುಸ್ವಾಮಿ, ಹರಿವೇಸಂದ್ರ ಲೋಕೇಶ್ ಅವರುಗಳು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸ್ಥಳದಲ್ಲಿದ್ದ ಜಿ.ಸಿ.ಕೃಷ್ಣಮೂರ್ತಿ ಅವರು ಹೆದ್ದಾರಿ ಪ್ರಾಧಿಕಾರ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಸರ್ವೇಯರ್ ಭೈರೇಶ್ ಮತ್ತು ಬಸವರಾಜು ಅವರೊಂದಿಗೆ ಚರ್ಚೆ ನಡೆಸಿ ಸರ್ವೇ ಕಾರ್ಯದಲ್ಲಿ ಅದ ದೋಷವನ್ನು ಮನವರಿಕೆ ಮಾಡಿಕೊಟ್ಟು ಸಂತ್ರಸ್ತ ರೈತ ಮಹಿಳೆ ಗಂಗಮ್ಮ ಅವರಿಗೆ ಬಾಕಿ ಬರಬೇಕಾದ ಪರಿಹಾರವನ್ನು ಶೀಘ್ರದಲ್ಲೇ ಒದಗಿಸುವಂತೆ ಒತ್ತಾಯಿಸಿದರು.
ನಂತರ ಚರ್ಚೆಯನ್ನು ಆಲಿಸಿದ ಅಧಿಕಾರಿಗಳು ಸಂತ್ರಸ್ತೆಗೆ ದಾಖಲೆಯೊಂದಿಗೆ ಕಚೇರಿಗೆ ಬರಲು ಸೂಚಿಸಿ ಸೂಕ್ತ ಪರಿಹಾರ ನೀಡುವುದಾಗಿ ಪರಿಸ್ಥಿತಿ ತಿಳಿಗೊಳಿಸಿದರು.