ತುಮಕೂರು ಬ್ರೇಕಿಂಗ್ : ಸಚಿವ ಸ್ಥಾನಕ್ಕೆ ಆಕಾಂಕ್ಷಿ ನಾನಲ್ಲ ಬಿಜೆಪಿ ಶಾಸಕ ಜ್ಯೋತಿಗಣೇಶ

ತುಮಕೂರು: ತುಮಕೂರು ಸೇರಿದಂತೆ ಕರ್ನಾಟಕದಲ್ಲಿ ಬಿಜೆಪಿಯನ್ನ ಪಕ್ಷಕ್ಕೆ ತರಲು ಬಹಳಷ್ಟು ಜನ ಪ್ರಯತ್ನಪಟ್ಟಿದ್ದಾರೆ, ನಾನು ಇನ್ನು ಎರಡನೇ ಸಲ ಚುನಾವಣೆಗೆ ನಿಂತ್ತು ಶಾಸಕನಾಗಿ ಗೆದ್ದು ಸಚಿವ ಸ್ಥಾನ ಕೆಳೋದು ಸಮಂಜಸ ಅಲ್ಲ, ನಾನು ಯಾವುದೇ ಸಚಿವ ಸ್ಥಾನಕ್ಕೆ ಆಕಾಂಕ್ಷಿ ಅಲ್ಲ ಎಂದು ಬಿಜೆಪಿ ಶಾಸಕ ಜ್ಯೋತಿಗಣೇಶ ತಿಳಿಸಿದರು.

ನಾಯಕರ ಹಿಂದೆ ಇರುವ ಬಹಳ ಜನ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ನಾಯಕರಿಗೆ ಸಚಿವ ಸ್ಥಾನ ಸಿಗಬೇಕೆಂದು ಸಮಾಜಿಕ ಜಾಲತಾಣದಲ್ಲಿ ಮತ್ತು ಪಕ್ಷದ ಹಿರಿಯ ನಾಯಕರನ್ನ ಭೇಟಿ ಮಾಡಿ ಸಚಿವ ಸ್ಥಾನ ಕೆಳೋದು ಮತ್ತು ಲಾಬಿ ಮಾಡುವುದು ಗೌರವ ತರುವಂತದಲ್ಲ. ಪಕ್ಷಕಾಗಿ ಬಹಳ ಹಿರಿಯ ಮುಖಂಡರು ಜೀವನವನ್ನೆ ತ್ಯಾಗ ಮಾಡಿದ್ದಾರೆ, ಮೂರ್ನಾಲ್ಕು ಬರಿ ಶಾಸಕರಾಗಿರುವವರು ಇನ್ನೂ ಕೂಡ ಸಚಿವರಗುವುದಕ್ಕೆ ಆಗಿಲ್ಲ. ನಾವು ಕೂಡ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮತ್ತು  ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯಕ್ಕೆ ಆಗಿರುವಂತಹ ತೊಂದರೆಗಳು ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಸರಿಯಾಗಿ ನಿಭಾಯಿಸಿ ಮುಂದಿನ ಚುನಾವಣೆಗೆ ಹೋಗಬೇಕಾಗಿದೆ ಎಂದು ತುಮಕೂರು ಜಿಲ್ಲೆ ನಗರ ಶಾಸಕ ಜ್ಯೋತಿಗಣೇಶ ಇಂದು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ವಿಡಿಯೋ ಇದೆ ನೋಡಿ…