ಏಕಲವ್ಯ ವಸತಿ ಕಾಲೇಜು ಪ್ರವೇಶಕ್ಕೆ ಆಹ್ವಾನ

ತುಮಕೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊರಟಗೆರೆ ತಾಲ್ಲೂಕು ಬಜ್ಜನಹಳ್ಳಿಯ ಏಕಲವ್ಯ ಮಾದರಿ ವಸತಿ ಪದವಿ ಕಾಲೇಜಿನಲ್ಲಿ 2020-21ನೇ ಸಾಲಿಗೆ ಪ್ರಥಮ ಪಿ.ಯು.ಸಿ. ತರಗತಿಗೆ ಪಿ.ಸಿ.ಎಂ.ಬಿ. ಹಾಗೂ ಪಿ.ಸಿ.ಎಂ.ಸಿ. ವಿಭಾಗಕ್ಕೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಈ ವಸತಿ ಶಾಲೆಯಲ್ಲಿ  ಖಾಲಿ ಇರುವ 11 ಸೀಟುಗಳಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ನೇರವಾಗಿ ದಾಖಲಾತಿ ನಿಬಂಧನೆಗೊಳಪಟ್ಟಿರುತ್ತದೆ. ದಾಖಲಾತಿಗಾಗಿ ರಜಾ ದಿನ ಸೇರಿದಂತೆ ಅಕ್ಟೋಬರ್ 27 ಕಡೆಯದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9986831986/ 9880618203ನ್ನು ಸಂಪರ್ಕಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಟಿ.ಎಲ್.ಎಸ್. ಪ್ರೇಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ