ಗಾಂಜಾ ಸೊಪ್ಪು ಸಾಗಾಣಿಕೆ ಇಬ್ಬರ ಬಂಧನ, 70ಸಾವಿರ ಮೌಲ್ಯದ 6೦೦ಗ್ರಾಂ ಗಾಂಜಾ ಸೊಪ್ಪು ಪೊಲೀಸರ ವಶ | Vishwa kannadi

ಕೊರಟಗೆರೆ: ತುಂಬಾಡಿ ಟೋಲ್‌ಪ್ಲಾಜಾ ಸಮೀಪದ ಪೆಟ್ಟಿಗೆ ಅಂಗಡಿ ಮುಂಭಾಗ ನಿಂತಿದ್ದ ದ್ವೀಚಕ್ರ ವಾಹನದ ಮೇಲೆ ಕೊರಟಗೆರೆ ಅಬಕಾರಿ ನಿರೀಕ್ಷಕಿ ಶ್ರೀಲತಾ ನೇತೃತ್ವದ ಅಬಕಾರಿ ಪೊಲೀಸರ ತಂಡ ದಾಳಿ ನಡೆಸಿ ಇಬ್ಬರು ಆರೋಪಿಗಳಿಂದ 70ಸಾವಿರ ಮೌಲ್ಯದ 600ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿರುವ ಘಟನೆ ಬುಧವಾರ ನಡೆದಿದೆ.

ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿ ಗ್ರಾಪಂ ವ್ಯಾಪ್ತಿಯ ದಾಸರಹಳ್ಳಿ ಸಮೀಪದ ಟೋಲ್‌ಪ್ಲಾಜಾದ ಬಸ್ ನಿಲ್ದಾಣದಲ್ಲಿ ಇರುವ ಪೆಟ್ಟಿಗೆ ಅಂಗಡಿ ಮುಂಭಾಗ ನಿಂತಿದ್ದ ದ್ವೀಚಕ್ರ ವಾಹನದ ಮೇಲೆ ದಾಳಿ ನಡೆಸಿದಾಗ ಸುಮಾರು 70ಸಾವಿರ ಮೌಲ್ಯದ 600ಗ್ರಾಂನಷ್ಟು ಸೊಪ್ಪು, ಹೂವು, ಬೀಜ ಹಾಗೂ ತೆನೆ ಮಿಶ್ರಿತ ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಸಾಗಾಣಿಕೆ ಮಾಡುತ್ತೀದ್ದ ಮಧುಗಿರಿ ತಾಲೂಕು ಕಾಟಗಾನಹಟ್ಟಿಯ ಶಿವಣ್ಣ ಮತ್ತು ಕೊರಟಗೆರೆ ತಾಲೂಕು ವೀರನಗರ ವಾಸಿಯಾದ ಯಲ್ಲಪ್ಪ ಬಂಧಿತ ಆರೋಪಿಗಳನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ. ದಾಳಿಯ ವೇಳೆ ಅಬಕಾರಿ ನಿರೀಕ್ಷಕಿ ಶ್ರೀಲತಾ, ಉಪ ನಿರೀಕ್ಷಕಿ ವೈಷ್ಣವಿ ಕುಲಕರ್ಣಿ, ಸಿಬ್ಬಂಧಿಗಳಾದ ದಾದಾಪೀರ್, ರಂಗಧಾಮಯ್ಯ, ಮಲ್ಲಿಕಾರ್ಜುನ್, ಮಂಜುಳ, ಮಧು ಉಪಸ್ಥಿತರಿದ್ದಾರೆ.