ತುಮಕೂರು: ಸಿದ್ದರಾಮಯ್ಯ ಅವರು ಶೂನ್ಯ ವರ್ಷ ಎಂದು ಸರ್ಕಾರ ಘೋಷಣೆ ಮಾಡಬೇಕು ಎಂಬ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ವೈಎ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವರು ಅನೇಕ ಕಡೆ ಮಾಧ್ಯಮಕ್ಕೆ ಹೇಳಿಕೆಗಳನ್ನ ಕೊಡುತ್ತಿದ್ದಾರೆ ಆದರೆ ಸಿದ್ದರಾಮಯ್ಯ ಅವರು ಮುಟ್ಟಿ ನೋಡಿಕೋಳ್ಳಬೇಕಾಗಿದೆ ಮೈಸೂರಿನಿಂದ ಬಾದಾಮಿಗೆ ಹೋಗಿ ಆಗಿದೆ ಬಾದಾಮಿಯಿಂದ ಎಲ್ಲಿಗೆ ಎಂದು ಚರ್ಚೆ ಮಾಡಲಿ. ಸಮಾಜದಲ್ಲಿ ಗೊದಲ ಸೃಷ್ಠಿ ಮಾಡುವ ಕೆಲಸ ಸಿದ್ದರಾಮಯ್ಯ ಅವರು ಮಾಡಬಾರದು ಅವರು ಕೂಡ ಮುಖ್ಯುಮಂತ್ರಿಗಳಾದವರು ಈ ಪರಿಸ್ಥಿತಿಯನ್ನ ಅರ್ಥಮಾಡಿಕೊಂಡು ಹೇಳಿಕೆಗಳನ್ನ ಕೊಡಬೇಕು ಎಂದು ಮನವಿ ಮಾಡಿಕೊಳ್ಳುರತ್ತೇನೆ. ಈ ಸಂದರ್ಭಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ನೂತನ ಶಾಸಕ ಚಿದಾನಂದಗೌಡ, ಶಾಸಕ ವೈಎ ನಾರಾಯಣಸ್ವಾಮಿ ಮತ್ತು ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಮತ್ತಿತ್ತರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.