ಶಿರಾ: ಕಳ್ಳಂಬೆಳ್ಳ ಕೆರೆ ತುಂಬಿದ ಕಾರಣ ಕಳ್ಳಂಬೆಳ್ಳ ಗ್ರಾಮದ ಶಿಲ್ಪ(18) ಮತ್ತು ತಂಗಿ ಸುಶ್ಮಿತಾ(16) ಕೆರೆ ಹತ್ತಿರ ಹೋಗಿ ಸೆಲ್ಪಿ ಗೆತೆದುಕೊಂಡು ಬರುತ್ತೇವೆ ಎಂದು ತಾಯಿಗೆ ಹೇಳಿ ಹೋದವರು, ಕೆರೆಯ ದಡದಲ್ಲಿ ನಿಂತು ಸೆಲ್ಪಿ ಮುಂದಾಗಿದ್ದಾರೆ, ಸೆಲ್ಪಿ ತೆಗೆಯುವ ಭರಾಟೆಯಲ್ಲಿ ಕಾಲುಜಾರಿ ನೀರಿಗೆ ಬಿದ್ದ ಕಾರಣ ಅಕ್ಕ ತಂಗಿಯರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಕುಟುಂಬದ ಒಪ್ಪಿಗೆಯಂತೆ ಇಂದು ಶಿಲ್ಪಳಿಗೆ ನಿಶ್ಚಿತಾರ್ಥ ಆಗಬೇಕಾಗಿತ್ತು. ಕಳ್ಳಬೆಂಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.