ಸಿದ್ದಾರ್ಥ ಮೆಡಿಕಲ್ ಕಾಲೇಜ್ನಲ್ಲಿ ಹೃದ್ರೋಗ ಚಿಕಿತ್ಸಾ ಕೇಂದ್ರ ಆರಂಭ

ತುಮಕೂರು: ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮತ್ತು ಸುಸಜ್ಜಿತ ಸಿದ್ದಾರ್ಥ ಅಡ್ವಾನ್ಸಡ್ ಹಾರ್ಟ್ ಸೆಂಟರ್‍ನ್ನು ಅಕ್ಟೋಬರ್ 26 ವಿಜಯದಶಮಿ ಹಬ್ಬದಂದು ಆರಂಭಿಸಲಾಗುತ್ತಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಸಾಹೇ ವಿಶ್ವವಿದ್ಯಾಲಯ ನ್ಯಾಕ್ ‘ಎ’ ಗ್ರೇಡ್ ಮಾನ್ಯತೆ ಪಡೆದು ಕಾರ್ಯನಿರ್ವಹಿಸುತ್ತಿರುವ ಶ್ರೀಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜು ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ಹೊಸದಾಗಿ ಅತ್ಯಾಧುನಿಕ ಮತ್ತು ಸುಸಜ್ಜಿತ ಹೃದಯ ರೋಗ ತಪಾಸಣಾ ಮತ್ತು ಚಿಕಿತ್ಸಾ ಘಟಕ ಸೇವೆಯನ್ನು ಆರಂಭಿಸಲಿದೆ. ತುಮಕೂರು ಭಾಗದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ, ನುರಿತ ತಜ್ಞ ವೈದ್ಯರಿಂದ ಕೂಡಿದ  ಹೃದ್ರೋಗ ಆರೋಗ್ಯ ಸೇವೆ ದೊರೆಯುವ ಆಸ್ಪತ್ರೆ ಇಲ್ಲದಿರುವುದರಿಂದ ಸಂಬಂಧಪಟ್ಟ ವೈದ್ಯರು, ತಜ್ಞರೊಂದಿಗೆ ಚರ್ಚಿಸಿ ಈ ಹೊಸ ಚಿಕಿತ್ಸಾ ಘಟಕ ಆರಂಭಿಸಲು ತೀರ್ಮಾನಿಸಿದ್ದು,ಇದರಿಂದ ಜಿಲ್ಲೆಯ 10 ತಾಲೂಕು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಜನರಿಗೂ ಹೃದಯ ರೋಗ ತಪಾಸಣಾ ಸೇರಿದಂತೆ ಶಸ್ತ್ರಚಿಕಿತ್ಸಾ ಸೌಲಭ್ಯಗಳು ಈ ನೂತನ ಚಿಕಿತ್ಸಾ ಕೇಂದ್ರದಲ್ಲಿ ಲಭ್ಯವಾಗಲಿವೆ  ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.  ಅ.26 ರಂದು ಬೆಳಿಗ್ಗೆ 11 ಗಂಟೆ ಹೊಸ ಅತ್ಯಾಧುನಿಕ ಸೌಲಭ್ಯವುಳ್ಳ ಹೃದಯ ರೋಗ ತಪಾಸಣಾ ಮತ್ತು ಚಿಕಿತ್ಸಾ ಕೇಂದ್ರವನ್ನು ನವದೆಹಲಿಯ ಏಮ್ಸ್ ಡೀನ್ ಡಾ.ಬಲರಾಮ್ ಐರಾನ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವಹಿಸುವರು ಎಂದರು.  ಗೌರವ ಅತಿಥಿಗಳಾಗಿ ನವದೆಹಲಿಯ ಏಮ್ಸ ಪೆÇ್ರ.ಡಾ.ದೇವಗೌರೊ ವೆಲಾಯೌಡಮ್, ಡಾ.ತಮೀಮ್ ಅಹಮದ್, ಸಿದ್ದಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕರಾದ ಡಾ. ಜಿ.ಎಸ್. ಆನಂದ್, ಉಪಕುಲಪತಿ ಡಾ. ಪಿ. ಬಾಲಕೃಷ್ಣ ಶೆಟ್ಟಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.  ಹೃದ್ರೋಗಕ್ಕೆ ತುತ್ತಾಗಿ ಬೈಪಾಸ್ ಸರ್ಜರಿ ಆಗಬೇಕೆಂದರೆ ಸುಮಾರು 3.50 ಲಕ್ಷದಿಂದ 4 ಲಕ್ಷ ರೂ. ವರೆಗೆ ವೆಚ್ಚವಾಗಲಿದೆ. ಆದರೆ ನಮ್ಮ ಈ ಹೊಸ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಈ ಆರೋಗ್ಯ ಸೇವೆ ಲಭ್ಯವಾಗಲಿದೆ.ಜತೆಗೆ ಆಯುμÁ್ಮನ್ಭಾರತ್ ಸೇರಿದಂತೆ ಇನ್ನಿತರೆ ಆರೋಗ್ಯ ವಿಮೆಗಳ ಸೌಲಭ್ಯವೂ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಆಯುμÁ್ಮನ್ ಭಾರತ್ ಆರೋಗ್ಯ ಕಾರ್ಡ್‍ನಡಿ ಬರುವ ರೋಗಿಗಳಿಗೆ ಎಲ್ಲ ಆರೋಗ್ಯ ಸೇವೆ ಸೇರಿದಂತೆ ಔಷಧಿಗಳನ್ನೂ ಉಚಿತವಾಗಿ ನೀಡಲಾಗುವುದು.ವಿಶೇಷವಾಗಿ ಸಣ್ಣ ಮಕ್ಕಳಲ್ಲಿ ಉಂಟಾಗುವ ಹೃದ್ರೋಗ ಸಮಸ್ಯೆಗೂ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತಹ ಪರಿಣಿತ ಹೊಂದಿರುವ ವೈದ್ಯರ ಸೇವೆ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಈ ಹೊಸ ಹೃದಯರೋಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ಮತ್ತು ಶುಶ್ರೂಷಕಿಯರು ದಿನದ 24 ಗಂಟೆಯೂ ಲಭ್ಯ ಇರಲಿದ್ದಾರೆ.ಈ ಆರೋಗ್ಯ ಸಿಬ್ಬಂದಿಗೆ ವಸತಿಗೃಹದ ವ್ಯವಸ್ಥೆ ಸಹ ಮಾಡಿಕೊಡಲಾಗುವುದು. ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.  1979 ರಲ್ಲಿ ಹೆಚ್.ಎಂ.ಗಂಗಾಧರಯ್ಯ ಅವರು ಆರಂಭಿಸಿದ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯು ಈವರೆಗೆ ನಗರ, ಗ್ರಾಮಾಂತರ ಪ್ರದೇಶದ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸಿದೆ.ತಮ್ಮ ತಂದೆ ಗಂಗಾಧಯ್ಯನವರು ಅಂಬೇಡ್ಕರ್, ಬಸವಣ್ಣನವರ ಅನುಯಾಯಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಗೆಯೇ ನನ್ನ ಸಹೋದ ಡಾ. ಶಿವಪ್ರಸಾದ್ ಅವರು ಸಹ ಸ್ವತಃ ಕಣ್ಣಿನ ತಜ್ಞರಾಗಿ ಸರಕಾರಿ ಸೇವೆ ಸಲ್ಲಿಸಿ, ನಂತರ ತಂದೆಯವರೊಂದಿಗೆ ಸೇರಿ ಈ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ್ದಾರೆ. ಸತತ 30 ವರ್ಷಗಳ ಅವಿರತ ಸೇವೆಯಿಂದಾಗಿ ಇಂದು ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತಿದೆ ಎಂದರು.  ನಾನು ಆಸ್ಪತ್ರೆ ಆರಂಭಿಸುತ್ತಿರುವುದ ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಕೈಗೆಟಕಲಿ ಎಂದ ಉದ್ದೇಶದಿಂದ ಎಂದ ಅವರು, ಇದುವರೆಗೂ ಸಹ ಸಿದ್ದಾರ್ಥ ಮೆಡಿಕಲ್ ಕಾಲೇಜು ಬೇರೆ ಖಾಸಗಿ ನಸಿರ್ಂಗ್ ಹೋಂಗಳಲ್ಲಿ ಮಾಡುವ ಬಿಲ್ನ ಶೇ.25 ರಷ್ಟನ್ನು ಮಾತ್ರ ರೋಗಿಗಳಿಂದ ಪಡೆಯುತ್ತಿದೆ. ಜನಸಾಮಾನ್ಯರಿಗೆ ಈ ರೀತಿಯ ಆರೋಗ್ಯ ಸೇವೆ ಒದಗಿಸಲು ನಮ್ಮ ಸಿಕ್ಕಿರುವ ಈ ಅವಕಾಶವನ್ನು ಅದೃಷ್ಠ ಎಂದು ಭಾವಿಸಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.ಹೊಸದಾಗಿ ಆರಂಭವಾಗಿರುವ ಹೃದ್ರೋಗ ಚಿಕಿತ್ಸಾ ಘಟಕ ಬೆಂಗಳೂರಿನ ನಾರಾಯಣ ಹೃದಯಾಲಯ, ಜಯದೇವ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗಿಂತ ಅತ್ಯಾ ಞಧುನಿಕ ಉಪಕರಣಗಳನ್ನು ಹೊಂದಿರುತ್ತದೆ. ಅತ್ಯಾಧುನಿಕವಾಗಿ ನುರಿತ ತಜ್ಞರ ವೈದ್ಯರುಗಳು ಸಹ ನಮ್ಮ ಆಸ್ಪತ್ರೆಯಲ್ಲಿ ಇರಲಿದ್ದಾರೆ.ದಿನದ 24 ಗಂಟೆಯೂ ಈ ಸೇವೆ ಲಭ್ಯವಾಗಲಿದೆ ಎಂದರು.