ತುಮಕೂರು:ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಟಿ.ಬಿ.ಜಯಚಂದ್ರ ಅವರನ್ನು ಗೆಲ್ಲಿಸುವ ಮೂಲಕ ಜನಹಿತ ಮರೆತು, ಸ್ವಹಿತಾಸಕ್ತಿಯಲ್ಲಿ ತೊಡಗಿರುವ ಬಿಜೆಪಿ ಸರಕಾರದ ವಿರುದ್ದ ರಾಜ್ಯದ ಜನತೆಗೆ ಸ್ಪಷ್ಟ ಸಂದೇಶ ರವಾನಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಿರಾ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಶಿರಾ ವಿಧಾನಸಭಾ ಉಪಚುನಾವಣೆಗೆ ಸಂಬಂಧಿ ಸಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರವಾಗಿ ಶಿರಾ ತಾಲೂಕಿನ ಯತಪ್ಪನಹಟ್ಟಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಕೋರೋನಾ ನಿಯಂತ್ರಣದಲ್ಲಿ ವಿಫಲವಾಗಿರುವ,ಉತ್ತರ ಕರ್ನಾಟಕ ನೆರೆಯಿಂದ ನರಳುತ್ತಿರುವ ಜನತೆಗೆ ಕನಿಷ್ಠ ಸಾಂತ್ವನವನ್ನು ಹೇಳಲಾಗದ ಬಿಜೆಪಿ ಪಕ್ಷದ ಸರಕಾರ ಅಧಿಕಾರದಲ್ಲಿ ಉಳಿಯಲು ನೈತಿಕತೆ ಇಲ್ಲ ಎಂಬುದನ್ನು ಜನರು ಈ ಚುನಾವಣೆಯಲ್ಲಿ ತೋರಿಸಬೇಕಾಗಿದೆ ಎಂದರು. ಬರ, ನೆರೆ ಮತ್ತು ಕೋರೋನದಂತಹ ಸಂಕಷ್ಟವನ್ನು ಎದುರಿಸುತ್ತಿರುವ ಜನತೆ ಇಂದು ಏನಾದರೂ ಎರಡು ಹೊತ್ತಿನ ಊಟ ಮಾಡುತ್ತಿದ್ದರೆ ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಕಾರಣ. ಅನ್ನ ಭಾಗ್ಯ ನಂತರ ಕೇಂದ್ರದಿಂದಾಗಲಿ ಮತ್ತು ರಾಜ್ಯ ದಿಂದಾಗಲಿ ಬಡವರ ಹಸಿವು ನೀಗಿಸಲು ಹೊರ ಯೋಜನೆ ಬಂದಿಲ್ಲ.ಕೋವಿಡ್ಸಂ ಕಷ್ಟದಲ್ಲಿ ಕ್ಷೌರಿಕರಿಗೆ,ಆಟೋ ಚಾಲಕರಿಗೆ ಹಾಗೂ ಕುಲಕಸುಬನ್ನೇ ನಂಬಿ ಬದುಕುತಿದ್ದ ಜನರಿಗೆ ನೀಡುವುದಾಗಿ ಹೇಳಿದ್ದ ಪರಿಹಾರದ ಹಣ ಇದುವರೆಗೂ ಆ ಸಮುದಾಯಗಳ ನೊಂದ ಜನರಿಗೆ ತಲುಪಿಲ್ಲ.ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ವಂಚಿಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮಾತನಾಡಿ,ಕ್ಷೇತ್ರವನ್ನು ಅಭಿವೃದ್ದಿ ಪತದತ್ತ ತೆಗೆದುಕೊಂಡು ಹೋಗುವುದು ನನ್ನ ಮೊದಲ ಆದ್ಯತೆ.ನೀರಾವರಿ ವಿಚಾರದಲ್ಲಿ ಯಾರು ಏನೇ ಮಾತನಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ.ನಾನು ಮಾಡಿರುವ ಕೆಲಸ ಬ್ಯಾರೇಜ್‍ಗಳ ಜನರ ಮುಂದಿದೆ. ಜನರ ನಿರೀಕ್ಷೆಯಂತೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ಒದಿಗಿಸುವ ಗುರಿ ಹೊಂದಿದ್ದೇನೆ.ಬಿಜೆಪಿ ಪಕ್ಷದವರಂತೆ ಹಿಂದೊಂದು, ಮುಂದೊಂದು ಮಾತನಾಡುವುದಿಲ್ಲ.ಕೊಟ್ಟ ಮಾತಿ ನಂತೆ ನಡೆದುಕೊಳ್ಳುತ್ತೇನೆ ಎಂದರು.ರಾಜ್ಯ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ತಳ ಸಮುದಾಯಗಳು ಅಭಿವೃದ್ದಿ ಯಾಗಬೇಕೆಂದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ.ಆದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರನ್ನು ಗೆಲ್ಲಿಸುವ ಮೂಲಕ ಡಿ.ಕೆ.ಶಿವಕುಮಾರ್ಅ ವರ ಕೈ ಬಲಪಡಿಸುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಮತದಾರರಲ್ಲಿ ಮನವಿ ಮಾಡಿದರು. ಈ ವೇಳೆ ಜಿ.ಪಂ.ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ,ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್, ಮುಖಂಡರಾದ ಶಿವಣ್ಣ, ಶ್ರೀನಿವಾಸಬಾಬು, ರುದ್ರೇಶ್, ಕಾಳಯ್ಯ, ಶಿವಣ್ಣ ಉಪಸ್ಥಿತರಿದ್ದರು.
