ಕತೆಯ ದೇಸಿ ರೂಪ:ಡಾ.ಎಸ್.ಶಿವರಾಜಪ್ಪ

ತುಮಕೂರು: ಬ್ರಿಟಿಷರು ಕೂಡ ಗೌರವಿಸುತ್ತಿದ್ದ ಮಹಾನ್ ವ್ಯಕ್ತಿತ್ವ ಗಾಂಧೀಜಿಯವರದ್ದು. ಅವರು ನಾಗರಿತೆಯ ದೇಸಿ ರೂಪವಾಗಿದ್ದರು ಎಂದು ಮೈಸೂರು ವಿವಿ ಓರಿಯಂಟಲ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ನ ನಿರ್ದೇಶಕ ಡಾ. ಎಸ್. ಶಿವರಾಜಪ್ಪ ತಿಳಿಸಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಗಾಂಧೀಜಿ ಬದುಕಿನಲ್ಲ ಮುಚ್ಚುಮರೆ ಇರಲಿಲ್ಲ.ಅವರ ಜೀವನ ತೆರೆದ ಪುಸ್ತಕವಾಗಿತ್ತು. ಗಾಂಧೀಜಿಯವರು ಆದರ್ಶಗಳ ಸಾಕಾರ ಮೂರ್ತಿ.ನನ್ನ ಹೆಸರಿಗೆ ಅಂಟಿಕೊಳ್ಳಬೇಡಿ, ನನ್ನ ತತ್ವ ಸಿದ್ಧಾಂತಗಳನ್ನು ಗಮನಿಸಿ ಎಂದವರು ಅವರು. ತನ್ನನ್ನು ಮಹಾತ್ಮ ಎಂದು ಕರೆಯುವುದು ಅವರಿಗೆ ಸ್ವತಃ ಇಷ್ಟವಿರಲಿಲ್ಲ. ನುಡಿದಂತೆ ನಡೆಯುವ ಛಾತಿ ಗಾಂಧೀಜಿಯವರಿಗೆ ಇತ್ತು. ಮಾತು-ಕೃತಿ ಎರಡೂ ಒಂದೇ ಆಗಿತ್ತು.ಅವು ಅವರ ಎರಡು ಕಣ್ಣುಗಳಂತೆ ಇದ್ದವು.ಕಸ ಗುಡಿಸುವ, ವೃದ್ಧಾಶ್ರಮಕ್ಕೆ ಭೇಟಿ ನೀಡುವ ಚಿತ್ರಗಳನ್ನು ತೆಗೆಸಿಕೊಂಡು ಪ್ರದರ್ಶಿಸುವುದು ಸಮಾಜ ಸೇವೆ ಅಲ್ಲ. ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದು ನಿಜವಾದ ಸೇವೆ ಎಂದರು.
ಈ ಸಂದರ್ಭ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು, ಗಾಂಧೀಜಿ ಶತಶತಮಾನಗಳಿಗೂ ಸಲ್ಲುವ ಜಾಗತಿಕ ಶಾಂತಿದೂತ. ಗಾಂಧೀಜಿ ಮಾಡದ ಪ್ರ ಯೋಗಗಳಿಲ್ಲ. ಅವರು ಸತ್ಯದೊಡನೆ ನಡೆಸಿದ ಪ್ರಯೋಗಗಳು ಇಡೀ ಜಗತ್ತಿಗೆ ಮಾದರಿ. ಮೌಲ್ಯಗಳು ಕುಸಿಯುತ್ತಿರುವ ಇಂದಿನ ಕಾಲದಲ್ಲಿ ಅವರ ಮೌಲ್ಯಗಳು ನಮಗೆ ಮಾರ್ಗದರ್ಶಿಯಾಗಬೇಕು. ನಮಗೆ ಇಂದು ದೊರೆಯುತ್ತಿರುವ ಸೌಲಭ್ಯಗಳಿಗೆ ನ್ಯಾಯ ಸಲ್ಲಿಸುವಂತಹ ಕೆಲಸ ಮಾಡುತ್ತಿದ್ದೇವೆಯೇ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ನೇರನುಡಿ,ನಿಷ್ಠುರತೆ,ತ್ಯಾಗ,ಸರಳತೆ ನಮ್ಮ ಆದರ್ಶ ಗಳಾಗಬೇಕಿದೆ ಎಂದರು.
ಕುಲಸಚಿವ ಪ್ರೊ.ಕೆ.ಎನ್.ಗಂಗಾ ನಾಯಕ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.