ಎಸಿಬಿ ಬಲೆಗೆ ಪೋರೆನ್ಸಿಕ್ ಲ್ಯಾಬ್ ಡಿವೈಎಸ್ಪಿ

ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಬ್ಯಾಂಕ್ ಅಫ್ ಬರೋಡದಲ್ಲಿ ನೌಕರಿ ಪಡೆದಿದ್ದ ವ್ಯಕ್ತಿಯ ಬೆಳರಚ್ಚು ಮುದ್ದೆಯಲ್ಲಿ ಕಂಡು ಬಂದ ದೋಷವನ್ನು ತಿದ್ದುಪಡಿ ಮಾಡಲು ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದ ಬೆಂಗಳೂರಿನ ಮಡಿವಾಳದ ಪೋರೆನ್ಸಿಕ್ ಲ್ಯಾಬ್ ನ ಹಿರಿಯ ತಜ್ಞರನ್ನು ತುಮಕೂರಿನ ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ನಗರದ ಪೂರ್ ಹೌಸ್ ಕಾಲೋನಿಯ ನಿವಾಸಿಯೊಬ್ಬರು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಬ್ಯಾಂಕ್ ಆಫ್ ಬರೋಢದಲ್ಲಿ ಉದ್ಯೋಗ ಪಡೆದಿದ್ದರು.ಉದ್ಯೋಗ ನೇಮಕಕ್ಕೂ ಮುನ್ನ ಬ್ಯಾಂಕಿನವರು,ಅಭ್ಯರ್ಥಿ ಅರ್ಜಿಸಲ್ಲಿಸುವಾಗ ನೀಡಿದ ಬೆರಳಚ್ಚು ಮುದ್ರೆ ಮತ್ತು ಈಗ ನೀಡಿರುವ ಬೆರಳಚ್ಚು ಮುದ್ರೆಯಲ್ಲಿ ವ್ಯತಾಸ ಕಂಡು ಬರುತ್ತಿದ್ದು,ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ದೃಢಿಕರಿಸಿ ನೀಡುವಂತೆ ಮಡಿವಾಳದ ಪೋರೆನ್ಸಿಕ್ ಲ್ಯಾಬ್‍ಗೆ ಪತ್ರ ಬರೆದಿದ್ದರು.

ಸದರಿ ಪತ್ರದ ಆಧಾರದ ಮೇಲೆ ಮದ್ಯವರ್ತಿಗಳ ಮೂಲಕ ಅಭ್ಯರ್ಥಿಯನ್ನು ಸಂಪರ್ಕಿಸಿದ ಡಿವೈಎಸ್ಪಿ ಶರಣಪ್ಪ ಡಿ.ಎಸ್. ಅವರು,1 ಲಕ್ಷ ರೂ ಬೇಡಿಕೆ ಇಟ್ಟಿದ್ದರು. ಹಣ ನೀಡಲು ಇಷ್ಟವಿಲ್ಲದ ಅವರು ತುಮಕೂರು ಎಸಿಬಿಗೆ ದೂರು ನೀಡಿದ್ದರು. ಸದರಿ ದೂರಿನ ಮೇರೆಗೆ ಎಫ್ ಐ.ಆರ್.ದಾಖಲಿಸಿದ ಪೊಲೀಸರು ಇಂದು, ಮಧ್ಯವರ್ತಿಯ ಮೂಲಕ ಶರಣ್ಣಪ್ಪ ಅವರಿಗೆ 60,000ರೂ ನೀಡುವಾಗ ಲಂಚದ ಮಾಲಿನ ಸಮೇತ ಬಂಧಿಸಿದ್ದಾರೆ.