ಕ್ರೈಂ ನ್ಯೂಸ್: ಸೆಲ್ಫಿ ವಿಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

ತುಮಕೂರು: ಹೆಂಡತಿ, ಅತ್ತೆ, ಮಾವನ ಕಿರುಕುಳದಿಂದ ವ್ಯಕ್ತಿ ಆತ್ಮಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ರಂಗನಹಳ್ಳಿ ಬೋವಿ ಕಾಲೋನಿಯಲ್ಲಿ ಲೋಕೇಶ್( 30) ಸೆಲ್ಫಿ ವಿಡಿಯೋ ಮಾಡಿ ಕೀಟ ನಾಶಕ ಸೇವಿಸಿ ವಿವಾಹಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಳೆದ ದಿ15 ರಂದು ಈ ಘಟನೆ ನಡೆದಿದೆ.

ನನ್ನ ಸಾವಿಗೆ ಹೆಂಡತಿ ಹೇಮಾ, ಅತ್ತೆ ಧನಲಕ್ಷಿ, ಮಾವ ರಾಜು ಹಾಗೂ ಹೆಂಡತಿಯ ಪ್ರಿಯಕರ ಚೇತನ್ ಕಾರಣ ಎಂದು ಲೋಕೆಶ್ ತಿಳಿಸಿದ್ದರೆ, ಪ್ರತಿ ನಿತ್ಯ ಬ್ಲಾಕ್ ಮೇಲ್,‌ ಕೊಲೆ ಬೆದರಿಕೆ ಹಾಕುತ್ತಿದ್ದಾರೆ.  ನಾವು ಹೇಗೆ ಬದುಕಲಿ ಎಂದು ಅಳಲು ತೋಡಿಕೊಂಡು

ಸೆಲ್ಪಿ ವಿಡಿಯೋ ಮಾಡಿಟ್ಟು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.