ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೇಮಾವತಿ ನಾಲೆಗೆ ಪ್ರೇಮಿಗಳಿಬ್ಬರು ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರಮೇಶ್ (19)ಎಂಬ ಯುವಕ ಕಳೆದ ಒಂದೂವರೆ ವರ್ಷದಿಂದ ಸುಶ್ಮಿತ(19) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು ಪ್ರೇಮಿಗಳಿಬ್ಬರು ಬೇರೆಬೇರೆ ಕೋಮಿನವರಾಗಿದ್ದು ಮನೆಯಲ್ಲಿ ಈ ವಿವಾಹಕ್ಕೆ ಅನುಮತಿ ನೀಡುವುದಿಲ್ಲ ಎಂಬ ಭಯಕೆ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ . ಮೃತ ರಮೇಶ್ ಐಟಿ ವಿದ್ಯಾರ್ಥಿಯಾಗಿದ್ದು ಸುಷ್ಮಿತಾ ಪದವಿ ವಿದ್ಯಾರ್ಥಿಯಾಗಿದ್ದಾಳೆ. ಇವರು ಇಬ್ಬರು ಒಂದೇ ಬಾರಿಗೆ ಕಾಲುವೆಗೆ ಹಾರಿ ಪ್ರಾಣ ಬಿಟ್ಟಿದ್ದು 2ದೇಹಗಳು ಒಂದಕ್ಕೊಂದು ತಬ್ಬಿಕೊಂಡ ರೀತಿಯಲ್ಲಿ ನಾಲೆಯಲಿ ಹೋಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಎಡೆಮಾಡಿದೆ. ಪ್ರಕರಣ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ